ಉಡುಪಿ: ರೆಡ್‌ಕ್ರಾಸ್‌ನಿಂದ ಗಿನ್ನೆಸ್ ದಾಖಲೆ
Update: 2017-02-26 21:39 IST
ಉಡುಪಿ ಫೆ.25: ಕಳೆದ ವರ್ಷ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಆರೋಗ್ಯ ಪಾಲುದಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು 15 ವಿವಿಧ ಸ್ಥಳಗಳಲ್ಲಿ ಕೇವಲ ಎಂಟು ಗಂಟೆಯಲ್ಲಿ 3034 ಯೂನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಿ ಗಿನ್ನೆಸ್ ದಾಖಲೆ ಸ್ಥಾಪಿಸಿದೆ.
ಈ ಪ್ರಶಸ್ತಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಹಾಗೂ ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಇತ್ತೀಚೆಗೆ ಸ್ವೀಕರಿಸಿದರು.
ಉಪಾಧ್ಯಕ್ಷ ಪ್ರೊ.ಎನ್.ಆರ್.ಶೆಟ್ಟಿ, ಉಪಸಭಾಪತಿ ಅಪ್ಪಾ ರಾವ್ ಅಕ್ಕೋಣೆ, ಪ್ರಧಾನ ಕಾರ್ಯದರ್ಶಿ ಎಸ್.ಅಶೋಕ್ ಕುಮಾರ್ ಶೆಟ್ಟಿ, ಸದಸ್ಯ ಶಂಕರಪ್ಪ ಮುಗದ್ ಮೊದಲಾದವರು ಉಪಸ್ಥಿತರಿದ್ದರು.