ಪಡುಬಿದ್ರಿ ಘಟನೆ: ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹ
Update: 2017-02-26 21:49 IST
ಉಡುಪಿ, ಫೆ.26: ಪಡುಬಿದ್ರಿಯಲ್ಲಿ ಶಾಂತಿಕದಡುವ ಕೆಲಸ ಮಾಡುತ್ತಿ ರುವ ಸಂಘಪರಿವಾರದ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆ ಅರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಡುಬಿದ್ರಿ ವಲಯ ಆಗ್ರಹಿಸಿದೆ.
ಸುಖಾಂತ್ಯಗೊಂಡ ಮುದರಂಗಡಿ ಹಲ್ಲೆ ಪ್ರಕರಣದ ವಿಚಾರದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಸಂಘಪರಿವಾರದ ಕಾರ್ಯ ಕರ್ತರು ಮಸೀದಿಗೆ ಕಲ್ಲು ಎಸೆದು, ಎಲ್ಲೂರಿನ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಶಾಂತಿ ಕದಡುವ ಸಂಘಟನೆಗೆ ಕಡಿವಾಣ ಹಾಕಲು ಪೋಲಿಸ್ ಇಲಾಖೆಗೆ ಸೂಚಿಸ ಬೇಕು ಎಂದು ಪಿಎಫ್‌ಐ ಪಡುಬಿದ್ರಿ ವಲಯ ವಿಭಾಗೀಯ ಅಧ್ಯಕ್ಷ ಹಮೀದ್ ಉಚ್ಚಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.