ಅಂಗರಗುಡ್ಡೆ : ಕ್ರಿಕೆಟ್ ಪಂದ್ಯಾಟದಲ್ಲಿ ಗುಂಪು ಘರ್ಷಣೆ
Update: 2017-02-26 22:15 IST
ಮುಲ್ಕಿ, ಫೆ.26: ಅತಿಕಾರಿಬೆಟ್ಟು ಗ್ರಾಮ ಪಂಚಾಯಯತ್ ವ್ಯಾಪ್ತಿಯ ಅಂಗರಗುಡ್ಡೆ ಎಂಬಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂದಿಸಿ ಎರಡು ತಂಡಗಳ ಮಾರಾಮಾರಿ ನಡೆದ ಘಟನೆ ರವಿವಾರ ಸಂಜೆ ನಡೆದಿದೆ.
ಸ್ಥಳೀಯ ನ್ಯೂಸ್ಟಾರ್ ಕ್ರಿಕೆಟ್ ಕ್ಲಬ್ ಅಂಗರಗುಡ್ಡೆಯಲ್ಲಿ ಆಯೋಜಿಸಿದ್ದ ಪಂದ್ಯಾಟದಲ್ಲಿ ಸೆವೆನ್ ಸ್ಟಾರ್ ಕಾರ್ನಡು ಹಾಗೂ ಇಂದಿರಾನಗರದ ತಂಡಗಳು ಆಟದಲ್ಲಿ ನಿರತರಾಗಿದ್ವು. ಈ ವೇಳೆ ಸೆವೆನ್ ಸ್ಟಾರ್ ತಂಡದ ಆಟಕಾರ ಚೆಂಡನ್ನು ಥ್ರೋ ಮಾಡುತ್ತಿರುವುದಾಗಿ ಆರೋಪಿಸಿದಾಗ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು ಎನ್ನಲಾಗಿದೆ.
ತಕ್ಷಣ ವಿವರ ಅರಿತ ಮುಲ್ಕಿ ಪೊಲೀಸರು ಸ್ಥಳಕ್ಕಾಗಮಿಸಿ ಶಾಂತಿ ಕಾಪಾಡುವಂತೆ ವಿನಂತಿಸಿ ಜಗಳವನ್ನು ತಹಬದಿಗೆ ತಂದರು ಎಂದು ತಿಳಿದು ಬಂದಿದೆ.