ಮಂಗಳೂರು: ದೇವಸ್ಥಾನಗಳ ಅಭಿವೃದ್ಧಿಗೆ ರೂ.1.28 ಕೋಟಿ ಅನುದಾನ ಮಂಜೂರು
ಮಂಗಳೂರು, ಫೆ.22: ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ಸರಕಾರದಿಂದ ರೂ.1.28 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರ ಕ್ಷೇತ್ರ, ಗೋಳ್ತಮಜಲು ಹಾಗೂ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಕಾವಳಪಡೂರು ಇಲ್ಲಿಗೆ ತಲಾ ರೂ.15 ಲಕ್ಷ, ಪೆರಿಯೋಡಿಬೀಡು ಶ್ರೀ ಕನಪಡಿತ್ತಾಯ ದೈವಸ್ಥಾನ, ಕಳ್ಳಿಗೆ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ, ಸಜೀಪಮುನ್ನೂರು, ಶ್ರೀ ಈಶ್ವರ ಮಂಗಲ ಸದಾಶಿವ ದೇವಸ್ಥಾನ, ಸಜೀಪಮೂಡ, ಶ್ರೀ ಆದಿನಾಥ ಸ್ವಾಮಿ ಬಸದಿ, ಪಂಜಿಕಲ್ಲು, ಇಲ್ಲಿಗೆ ತಲಾ 10 ಲಕ್ಷ ರೂ., ಶ್ರೀಕಾವೇಶ್ವರ ದೇವಸ್ಥಾನ, ತೆಂಕಬೆಳ್ಳೂರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರಿಂಕ ನೆಟ್ಲಮುಡ್ನೂರು, ಶ್ರೀ ಉಮಾಮಹೇಶ್ವರಿ ದೇವಸ್ಥಾನ, ಮಂಗಳಪದವು ವಿಟ್ಲ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಜಾಲ್ಸೂರು, ಸುಳ್ಯ ತಾಲೂಕು, ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ, ಸುಳ್ಯ, ಶ್ರೀ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸುಳ್ಯ, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಾಳ್ತಿಲ ಗ್ರಾಮ, ಬಂಟ್ಚಾಳ ತಾಲೂಕು ಇಲ್ಲಿಗೆ ತಲಾ ರೂ.5 ಲಕ್ಷ ರೂ., ಬಂಟ್ವಾಳ ತಾಲೂಕಿನ ಶ್ರೀ ಕೊಡಮಣಿತ್ತಾಯ ದೇವಸ್ಥಾನ ಕುಂಟಲ್‌ಪಲ್ಕೆ, ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೇವಸ್ಥಾನ ನಂದನಹಿತ್ಲು, ಅಲೆತ್ತೂರು ಪಂಜುರ್ಲಿ ಧೂಮಾವತಿ ಬಂಟ ದೈವಸ್ಥಾನ, ನಂದನಬೆಟ್ಟು, ಇಲ್ಲಿಗೆ ತಲಾ ರೂ.3 ಲಕ್ಷ ಹಾಗೂ ಶ್ರೀ ಧರ್ಮದೈವದ ದೈವಸ್ಥಾನ ಗುಬ್ಯ ಕರೋಪಾಡಿ ಗ್ರಾಮ, ಇಲ್ಲಿಗೆ ರೂ2.50ಲಕ್ಷ ಮಂಜೂರಾಗಿದೆ ಎಂದು ಪ್ರಕಟನೆ ತಿಳಿಸಿದೆ.