ಗುತ್ತಕಾಡು: ಉಚಿತ ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ
ಗುತ್ತಕಾಡು : ಉಚಿತ ರೇಬಿಸ್ ಲಸಿಕೆ ಕಾಲ ಕಾಲಕ್ಕೆ ಸಾಕು ಪ್ರಾಣಿಗಳಿಗೆ ಚುಚ್ಚು ಮದ್ದು ನೀಡಿದಾಗ ಮಾರಕ ರೋಗಗಳಿಂದ ಕಾಪಾಡಬಹುದು. ಪ್ರತೀ ಗ್ರಾಮದಲ್ಲಿಯೂ ಇಂತಹ ಯೋಜನೆಗಳನ್ನು ಗ್ರಾಮದ ಹಿತದೃಷ್ಟಿಯಿಂದ ಸಂಘ ಸಂಸ್ಥೆಗಳು ಮುತುವರ್ಜಿ ವಹಿಸಿ ಪ್ರಾಯೋಜಿಸಬೇಕು ಎಂದು ಕಿನ್ನಿಗೋಳಿ ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ. ಸತ್ಯಶಂಕರ್ ಹೇಳಿದರು.
ಪಶು ಸಂಗೋಪನಾ ಇಲಾಖೆ ಹಾಗೂ ನವಚೈತನ್ಯ ಪ್ರೆಂಡ್ಸ್ ಗುತ್ತಕಾಡು ಆಶ್ರಯದಲ್ಲಿ ಗುತ್ತಕಾಡು ಬಸ್ಸು ನಿಲ್ದಾಣ ಬಳಿ ರವಿವಾರ ನಡೆದ ಉಚಿತ ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಂತಿನಗರ ಮೂಕಾಂಬಿಕಾ ದೇವಳ ಅರ್ಚಕ ಧರ್ಮದರ್ಶಿ ವಿವೇಕಾನಂದ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್‌ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯೆ ವಾಣಿ, ಟಿ. ಎಚ್ ಮಯ್ಯದ್ದಿ, ಗುತ್ತಕಾಡು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಿಜಯ ಅಂಚನ್, ನವಚೆತ್ಯನ್ಯ ಪ್ರೆಂಡ್ಸ್ ಗೌರವಾಧ್ಯಕ್ಷ ಚಂದ್ರಶೇಖರ್, ಅಧ್ಯಕ್ಷ ಶಿವಾನಂದ ಗುತ್ತಕಾಡು, ಕಾರ್ಯದರ್ಶಿ ನಕುಲ, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ, ಗುತ್ತಕಾಡು ಸರಕಾರಿ ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಕೃಷ್ಣ ಅಂಚನ್, ಕೇಶವ ದೇವಾಡಿಗ, ಪ್ರಕಾಶ್ ಆಚಾರ್ಯ, ಕಪಿಲ ಅಂಚನ್ ವಂದಿಸಿದರು. ಉಪಸ್ಥಿತರಿದ್ದರು.