×
Ad

ಕೋಟಿ-ಚೆನ್ನಯ ಕ್ರೀಡಾ ಕೂಟ-2017

Update: 2017-02-26 23:28 IST

ಮಂಗಳೂರು, ೆ.26: ಬಿಲ್ಲವ ಸೇವಾ ಸಮಾಜ(ರಿ) ಗರೋಡಿ ಬಳಿ, ಕಂಕನಾಡಿ, ಇದರ ವತಿಯಿಂದ ಕೋಟಿ ಚೆನ್ನಯ ಕ್ರೀಡಾಕೂಟವನ್ನು ಇತ್ತೀಚೆಗೆ ಕಂಕನಾಡಿ ಗರೋಡಿ ಬಳಿಯ ಮೈದಾನದಲ್ಲಿ ನಡೆಸಲಾಯಿತು.

 ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಸ್ಕೇಟಿಂಗ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಖುಷಿರಾಣಿಯವರ ಮೂಲಕ ಕಂಕನಾಡಿ ಉಜ್ಜೋಡಿಯ ಮಹಾಂಕಾಳಿ ದೈವಸ್ಥಾನದಿಂದ ಮೆರವಣಿಗೆಯಲ್ಲಿ ಗರೋಡಿ ಕ್ಷೇತ್ರಕ್ಕೆ ತರಲಾಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಹಾಬಲ ಪೂಜಾರಿ ವಹಿಸಿದ್ದರು. ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್‌ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು

ವೇದಿಕೆಯಲ್ಲಿ ಮಹಾನಗರಪಾಲಿಕೆಯ ಸದಸ್ಯರಾದ ಆಶಾ ಡಿಸಿಲ್ವಾ, ಪ್ರವೀಣ್ ಚಂದ್ರ ಆಳ್ವ, ಜೆ. ಸುರೇಂದ್ರ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಕಂಕನಾಡಿ ಘಟಕದ ಹರೀಶ್ ಪೂಜಾರಿ, ಬಿಲ್ಲವರ ಏಕೀಕರಣದ ಅಧ್ಯಕ್ಷ ರವಿ ಪೂಜಾರಿ, ಖ್ಯಾತ ಎಸ್. ಆರ್.ಆರ್.ಸಂಸ್ಥೆಯ ಮಾಲಕ ಶೈಲೇಂದ್ರ, ರಾಜ್ಯ ಜೆ.ಡಿ.ಎಸ್. ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ಸಂಘದ ಮಾಜಿ ಅಧ್ಯಕ್ಷ ಗೋಪಾಲ ಪೂಜಾರಿ ಮತ್ತು ಮೋಹನ್ ಪಡೀಲ್‌ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರೋಪ ಸಮಾರಂಭ: ಸಂಜೆ ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್‌ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

   ಕ್ರೀಡಾ ಸಮಿತಿಯ ಸಂಚಾಲಕ ದಿನೇಶ್ ಅಂಚನ್‌ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ಲ್ಯಾನ್ಸ್ ನಾಯಕ್ ಹುದ್ದೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ ಮೋಹನ್‌ದಾಸ್ ಅಮೀನ್, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ದೇಹದಾರ್ಢ್ಯ ಪಟು ನಿತೇಶ್ ಪೂಜಾರಿ, ಪವರ್ ಲಿಫ್ಟಿಂಗ್‌ನ ಗಣೇಶ್ ಕೆ., ಓಟಗಾರ್ತಿ ಯಶ್ಮಿತಾ, ಸ್ಕೇಟಿಂಗ್ ಪ್ರತಿಭೆಗಳಾದ ಮೋಕ್ಷಾ, ದಿಯಾ ದಾಸ್, ಖುಷಿರಾಣಿ ಹಾಗೂ ಕರಾಟೆಯ ಾಯಲ್ ವೇದಿಕೆಯಲ್ಲಿದ್ದ ಗಣ್ಯರಿಂದ ಸನ್ಮಾನಿಸಲ್ಪಟ್ಟರು. ದಿನವಿಡೀ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಕ ಮತ್ತು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಕೋಶಾಕಾರಿ ರಮಾನಂದ ಹಾಗೂ ಜೊ.ಕಾರ್ಯದರ್ಶಿ ನರೇಶ್‌ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಾಜಿ ಜೊ.ಕಾರ್ಯದರ್ಶಿ ಕಿರಣ್ ಕುಮಾರ್ ಸನ್ಮಾನ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕ್ರೀಡಾ ಸಂಚಾಲಕ ದಿನೇಶ್ ಅಂಚನ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಜಯಾ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News