ಬಂದ್ ಗೆ ಕರೆ ಕೊಟ್ಟವರಿಂದ ನಷ್ಟ ಭರಿಸಿಕೊಳ್ಳಲಿ: ಇಬ್ರಾಹೀಂ ಕೋಡಿಜಾಲ್
Update: 2017-02-27 12:51 IST
ಮಂಗಳೂರು, ಫೆ.27: ಕರಾವಳಿ ಸೌಹಾರ್ದ ರ‍್ಯಾಲಿಯನ್ನು ವಿರೋಧಿಸಿ ಶನಿವಾರ ದ.ಕ ಜಿಲ್ಲಾ ಬಂದ್ ಗೆ ಕರೆ ಕೊಟ್ಟು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿದ ಕೋಮುವಾದಿ ಶಕ್ತಿಗಳಿಂದ ಬಂದ್ ನಷ್ಟವನ್ನು ಭರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಆಗ್ರಹಿಸಿದ್ದಾರೆ.