ಕೇರಳದಲ್ಲಿ ಅಕ್ಕಿಕ್ಷಾಮ: ಜಯ ಕುಚ್ಲಕ್ಕಿಗೆ 50ರೂ.
ತಿರುವನಂತಪುರಂ,ಫೆ. 27: ರಾಜ್ಯದಲ್ಲಿ ಅಕ್ಕಿಯ ಬೆಲೆ ನಿಯಂತ್ರಿಸಲು ಸರಕಾರ ಸ್ಥಾಪಿಸಿದ ’ಅಕ್ಕಿಯಂಗಡಿ’ ಆರಂಭದಲ್ಲಿಯೇ ಮುಗ್ಗರಿಸಿದೆ. ಭಾರತೀಯ ಆಹಾರ ನಿಗಮದ ಮೂಲಕ ಸಾಕಷ್ಟು ಅಕ್ಕಿ ಸಿಗದಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಅಕ್ಕಿ ಬರುವುದು ಕಡಿಮೆಯಾಗಿದ್ದರಿಂದ ಯೋಜನೆ ತತ್ತರಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಕೇರಳದಲ್ಲಿ ಅಕ್ಕಿ ರೇಟು ಪುನಃ ಹೆಚ್ಚಳವಾಗಿದೆ.
ಈ ತಿಂಗಳು 13ಕ್ಕೆ ಅಕ್ಕಿಯಂಗಡಿಗಳ ರಾಜ್ಯಮಟ್ಟದ ಉದ್ಘಾಟನೆಯನ್ನು ಆಹಾರಸಚಿವ ಪಿ. ತಿಲೋತ್ತಮನ್ ತಿರುವನಂತಪುರಂನಲ್ಲಿ ಮಾಡಿದ್ದರು. ಸಾರ್ವಜನಿಕ ಮಾರುಕಟ್ಟೆಗಿಂತ ಶೇ. 10ರಷ್ಟು ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ನಿರ್ಧರಿಸಲಾಗಿತ್ತು. ಮಟ್ಟ ಅಕ್ಕಿ ಕೆಜಿಗೆ 24 ರೂಪಾಯಿ, ಜಯ ಅಕ್ಕಿಗೆ 25 ರೂಪಾಯಿ, ಬೆಳ್ತಿಗೆ ಅಕ್ಕಿ 23 ರೂಪಾಯಿಗೆ ವಿತರಿಸುವುದು ಯೋಜನೆಯಾಗಿದೆ. ಆದರೆ ಅಂಗಡಿ ಆರಂಭಗೊಂಡು ಎರಡು ವಾರ ಕಳೆದರೂ ಅಕ್ಕಿ ಅಕ್ಕಿಯಂಗಡಿಗಳಿಗೆ ಬಂದಿಲ್ಲ.
ಭಾರತೀಯ ಆಹಾರ ನಿಗಮದ ಮುಕ್ತ ಮಾರ್ಕೆಟ್ ಸ್ಕೀಂ ಪ್ರಕಾರ 25 ರೂಪಾಯಿಗೆ ಸರೇಖಾ ಅಕ್ಕಿಯನ್ನು ಖರೀದಿಸಿ ವಿತರಿಸಲಾಗುತ್ತಿದ್ದರೂ ಈ ಅಕ್ಕಿ 20 ರೂಪಾಯಿಗೆ ಸುಲಭವಾಗಿ ಲಭಿಸುತ್ತಿದೆ. ಆದ್ದರಿಂದ ಯಾರೂ ಅದನ್ನು ಖರೀದಿಸಲು ಸರಕಾರದ ಅಕ್ಕಿಯಂಗಡಿಗಳಿಗೆ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಯಕುಚ್ಲಕ್ಕಿಗೆ ಓಪನ್ ಮಾರ್ಕೆಟ್‌ನಲ್ಲಿ 50ರೂಪಾಯಿವರೆಗೂ ಬೆಲೆಯೇರಿಕೆಯಾಗಿದೆ.ಆಯಿಲ್ ಫಾಂ ಇಂಡಿಯದ ವೆಚ್ಚೂರ್ ಮಾಡರ್ನ್ ರೈಸ್ ಮಿಲ್‌ನಲ್ಲಿ ಸಿಗುವ ಅಕ್ಕಿ ಕೇವಲ ಕೋಟ್ಟಯಂ, ಆಲಪ್ಪುಝ, ಎರ್ನಾಕುಲಂ ಜಿಲ್ಲೆಗಳಿಗೆ ವಿತರಿಸಲು ಮಾತ್ರ ಸಾಲುತ್ತದೆ. ಜೊತೆಗೆ ಬೇರೆ ಅಕ್ಕಿಮಿಲ್‌ಗಳಿಂದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಅಕ್ಕಿಯ ಬೆಲೆ ಪುನಃ ಹೆಚ್ಚಳವಾಯಿತು. ಎರಡುದಿವಸ ಮೊದಲು ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಕೆಜಿಗೆ 47 ರೂಪಾಯಿ, ಜಯ ಅಕ್ಕಿ ಕೆಜಿಗೆ 50ರೂಪಾಯಿ ಬೆಲೆಯಿತ್ತೆಂದು ವರದಿ ತಿಳಿಸಿದೆ.