×
Ad

ಮಂಗಳೂರು ವಿವಿಗೆ ಮೊದಲ ಚಿನ್ನ ಮತ್ತು ಬೆಳ್ಳಿ ಪದಕ

Update: 2017-02-27 14:53 IST

ಮೂಡುಬಿದಿರೆ, ಫೆ.27: ಚಂಢೀಗಡದಲ್ಲಿ ಜರುಗುತ್ತಿರುವ ಅಖಿಲ ಭಾರತ ಅಂತರ್ ವಿವಿ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಲಭಿಸಿದೆ.

59 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ ಕಣ್ಣನ್ ವಿಜಯನ್ ಒಟ್ಟು 595 ಕೆಜಿ ಭಾರವನ್ನೆತ್ತಿ ಬೆಳ್ಳಿಯ ಪದಕ ಪಡೆದರೆ, ಮಹಿಳಾ ವಿಭಾಗದಲ್ಲಿ 63 ಕೆಜಿ ದೇಹತೂಕ ವಿಭಾಗದಲ್ಲಿ ಮರೀನಾ ದೇವಿ ಒಟ್ಟು 430ಕೆಜಿ ಭಾರವನ್ನೆತ್ತಿ ಚಿನ್ನದ ಪದಕ ಪಡೆದರು. ಇವರಿಬ್ಬರೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News