×
Ad

ಕುಡಿತದ ಮೋಜಿಗೆ 20ರೂ.ಕೊಡದ ಸಹೋದರನಿಗೆ ಚೂರಿ ಹಾಕಿದ ಭೂಪ

Update: 2017-02-27 15:41 IST

ಹೊಸದಿಲ್ಲಿ, ಫೆ. 27: ಅಣ್ಣತಮ್ಮಂದಿರ 20 ರೂಪಾಯಿ ಜಗಳ ಚೂರಿ ಇರಿತದಲ್ಲಿ ಸಮಾಪ್ತವಾಗಿದೆ. ಮದ್ಯಪಾನಕ್ಕಾಗಿ 20 ರೂಪಾಯಿ ಕೊಡದ ಸಹೋದರನ್ನು ಇನ್ನೊಬ್ಬ ಸಹೋದರ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಘಟನೆ ದಿಲ್ಲಿಯ ಸ್ವರೂಪ್ ನಗರದಲ್ಲಿ ನಡೆದಿದ್ದು ಸಹೋದರ ಬಂಟಿಗೆ ಚಾಕು ಹಾಕಿದ ಪಂಕಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಚೂರಿ ಇರಿತ ಪ್ರಕರಣವೊಂದರ ಗಾಯಾಳುವನ್ನುಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶನಿವಾರ ದಿಲ್ಲಿಪೊಲೀಸರಿಗೆ ಬಾಬುಜಗಜ್ಜೀವನ ರಾಂ ಆಸ್ಪತ್ರೆಯಿಂದ ಮಾಹಿತಿನೀಡಲಾಗಿತ್ತು. ಆಸ್ಪತ್ರೆಗೆ ಬಂದ ಪೊಲೀಸರಲ್ಲಿ ಮನೆಯಲ್ಲಿ ಕಳ್ಳತನಕ್ಕೆ ಬಂದವರು ಸಹೋದರ ಬಂಟಿಯನ್ನು ಗಾಯಗೊಳಿಸಿದ್ದಾರೆಂದು ಪಂಕಜ್ ಹೇಳಿದ್ದ. ನಂತರ ಖದ್ದ ಕಾಲನಿಯ ಇವರ ಮನೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಅಲ್ಲಿ ರಕ್ತಸಿಕ್ತ ಬಟ್ಟೆಗಳು ಮತ್ತು ಚಾಕು ಪೊಲೀಸರಿಗೆ ಸಿಕ್ಕಿತ್ತು. ನಂತರ ವಿವರವಾಗಿ ಪ್ರಶ್ನಿಸಿದಾಗ ಪಂಕಜ್ ತಾನೇ ಸಹೋದರನಿಗೆ ಇರಿದಿದ್ದೇನೆಂದು ಒಪ್ಪಿಕೊಂಡಿದ್ದ, ಘಟನೆಯನ್ನು ಅಡಗಿಸಿದ ಇಬ್ಬರ ತಾಯಿಯನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News