×
Ad

ಮೂಡುಬಿದಿರೆ: ಮಾರ್ಚ್ 3ರಿಂದ ತೋಡಾರು ದರ್ಗಾ ಉರೂಸ್

Update: 2017-02-27 17:22 IST

ಮೂಡುಬಿದಿರೆ : ಸಯ್ಯಿದ್ ವಲಿಯುಲ್ಲಾಹಿ (ಖ.ಸಿ.) ಅಂತ್ಯ ವಿಶ್ರಮ ಹೊಂದಿರುವ ಇತಿಹಾಸ ಪ್ರಸಿದ್ಧವಾದ ಪುಣ್ಯ ಸ್ಥಳ ತೋಡಾರು ದರ್ಗಾ ಉರೂಸ್ ಸಮಾರಂಭವು ಮಾರ್ಚ್ 3ರಿಂದ 11ರವರೆಗೆ ನಡೆಯಲಿದೆ ಎಂದು ತೋಡಾರು ದರ್ಗಾ ಉರೂಸ್ ಸಮಿತಿ ಅಧ್ಯಕ್ಷರಾದ ಟಿ.ಹೆಚ್. ಇಸ್ಮಾಯೀಲ್‌ರವರು ಹೇಳಿದರು.

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಬೆಳಿಗ್ಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಈ ಉರೂಸ್ ಸಮಾರಂಭದಲ್ಲಿ 8 ದಿನಗಳಾದ್ಯಂತ ಧಾರ್ಮಿಕ ಮತಪ್ರಭಾಷಣ ನಡೆಯಲಿದ್ದು, ಮಾರ್ಚ್ 3ರಂದು ಶುಕ್ರವಾರ ಜುಮಾ ನಮಾರ್ನ ನಂತರ ತೋಡಾರು ಜಮಾಅತ್ ಅಧ್ಯಕ್ಷರಾದ ಎಂ.ಎ.ಎಸ್. ಅಬೂಬಕ್ಕರ್ ಹಾಜಿ ಅವರು ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ನಡೆಯಲಿರುವ ಸ್ವಲಾತ್ ವಾರ್ಷಿಕದ ನೇತೃತ್ವವನ್ನು ಅತ್ರಾಡಿ ಖಾಝಿ ಶೈಖುನಾ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ವಹಿಸಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ವಾಗ್ಮಿಗಳಾದ ಖಾಸಿಂ ದಾರಿಮಿ ಕಿನ್ಯಾ, ಅಮೀರ್ ಅರ್ಶದಿ ಕರುವೇಲು, ಮಅ್ಮೂನ್ ಹುದವಿ ವಂಡೂರು, ಮುನೀರ್ ಹುದವಿ ವಿಳಯಿಲ್, ಅಶ್ರಫ್ ರಹ್ಮಾನಿ ಚೌಕಿ, ಅಬ್ದುಲ್ ಸಲೀಂ ಫೈಝಿ ತೋಡಾರು, ಅಬೂಬಕ್ಕರ್ ಸಿದ್ದೀಕ್ ಅರ್ಹರಿ ಪಯ್ಯನೂರ್, ರಹ್ಮತುಲ್ಲಾಹ್ ಖಾಸಿಮಿ ಮುತೇಡಂರವರಿಂದ ಮತಪ್ರವಚನ ನಡೆಯಲಿದೆ.

ಮಾರ್ಚ್ 8ರಂದು ಸಯ್ಯಿದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಆ ಆಶೀರ್ವಚನಗೈಯಲಿದ್ದಾರೆ.

ಸಮಾರೋಪದ ದಿನದ ತನಕ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ತೋಡಾರು ಮುದರ್ರಿಸ್ ಅಬ್ದುಲ್ ಸಲೀಂ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಾರ್ಚ್ 11ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ದ.ಕ. ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಉಪಾಧ್ಯಕ್ಷರಾದ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲಿದ್ದು, ಕೋಝಿಕ್ಕೋಡ್ ಖಾಝಿ ಅಸ್ಸಯ್ಯಿದ್ ಮುಹಮ್ಮದ್ ಜಮಲುಲ್ಲೈಲಿ ದುವಾ ನೆರವೇರಿಸಲಿದ್ದಾರೆ. ಅಂದು ಕೇರಳದ ಪ್ರಸಿದ್ಧ ವಾಗ್ಮಿಯಾದ ಶಾಫಿ ಯಮಾನಿ ನಿಝಾಮಿ ಕರಿಪೂರ್, ಅಬ್ದುಲ್ ಸಲೀಂ ಫೈಝಿ ತೋಡಾರ್ ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಸಚಿವ ರಮನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಡಾ ಎಂ. ಮೋಹನ ಆಳ್ವ, ಬಿ.ಹೆಚ್. ಅಬ್ದುಲ್ ಖಾದರ್, ಬಿ.ಯಂ. ಫಾರೂಕ್, ಇಬ್ರಾಹೀಂ ಕೋಡಿಜಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ತೋಡಾರು ಮಸೀದಿ ಉಪಾಧ್ಯಕ್ಷರಾದ ಎಂ. ಅಬ್ದುಲ್ ಹಕೀಂ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಎಸ್.ಎಮ್., ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News