×
Ad

ಬಂಟ್ವಾಳ: ಮಿತ್ತಬೈಲ್‌ನಲ್ಲಿ 18 ಸಂಘ ಸಂಸ್ಥೆಗಳಿಂದ ಬೃಹತ್ ಅಭಿನಂದನಾ, ಸನ್ಮಾನ ಕಾರ್ಯಕ್ರಮ

Update: 2017-02-27 17:58 IST

ಬಂಟ್ವಾಳ, ಫೆ. 27: ಪ್ರವಾದಿ ಚರ್ಯೆ ಆಶಯದೊಂದಿಗೆ ಇಸ್ಲಾಮೀ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವರಕ್ಕಲ್ ಮುಲ್ಲಕೋಯ ತಂಙಳ್‌ರವರಿಂದ ಸ್ಥಾಪನೆಗೊಂಡ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯು ಅಲ್ಪಾವಧಿಯಲ್ಲಿ ವಿಶ್ವವಿಖ್ಯಾತ ಸಂಘಟನೆಯಾಗಿ ರೂಪುಗೊಂಡಿರುವುದು ಸಮಸ್ತಕ್ಕೆ ಸೇವೆ ಸಲ್ಲಿಸಿದ ನಾಯಕರ ಪ್ರತೀಕವಾಗಿದೆ ಎಂದು ಅತ್ರಾಡಿ ಖಾಝಿ ಅಲ್‌ಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಹಾಗೂ ಅಧೀನ ಮದರಸ ಕಮಿಟಿ ಹಾಗೂ ಮಿತ್ತಬೈಲ್ ಜಮಾಅತ್ ವ್ಯಾಪ್ತಿಗೆ ಒಳಪಟ್ಟ 18 ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್‌ರವರಿಗೆ ರವಿವಾರ ಸಂಜೆ ಮಿತ್ತಬೈಲ್ ಜುಮಾ ಮಸೀದಿ ವಠಾರದಲ್ಲಿ ನಡೆದ ಬೃಹತ್ ಅಭಿನಂದನಾ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದವರೂ, ಕರ್ನಾಟಕದವರೂ ಅಲ್ಲದ ಅಬ್ದುಲ್ ಜಬ್ಬಾರ್ ಉಸ್ತಾದ್ ಸಮಸ್ತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆಧ್ಯಾತ್ಮಿಕ ಚಿಂತನೆ, ಧರ್ಮದ ಮೇಲಿರು ಬದ್ಧತೆ, ಕಾಲಾಜಿ, ಸರಳತೆ ಹಾಗೂ ವಿನಯ ಜೀವನವೇ ಜಬ್ಬಾರ್ ಉಸ್ತಾದರನ್ನು ಸಮಸ್ತದ ಉನ್ನತ ಸ್ಥಾನಕ್ಕೆ ಕೊಂಡೊಯ್ಯಿದಿದೆ. ಅಧಿಕಾರ, ನಾಯಕತ್ವವನ್ನು ತಿರಸ್ಕರಿಸುವ ಮಹಾನ್ ಗುಣವನ್ನು ಹೊಂದಿರುವ ಜಬ್ಬಾರ್ ಉಸ್ತಾದ್ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಖಾಝಿಯಾಗಿ ಸಲ್ಲಿಸಿರುವ ಸೇವೆ ಗಣನೀಯವಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಇಸ್ಲಾಮೀ ಶಿಕ್ಷಣಕ್ಕೆ ಸಮಸ್ತ ನೀಡಿರುವ ಕೊಡುಗೆಯ ಫಲವಾಗಿ ಇಡೀ ದೇಶದಲ್ಲಿ ದಕ್ಷಿಣ ಭಾರತ ಇಸ್ಲಾಮೀ ಶಿಕ್ಷಣದಲ್ಲಿ ಮುಂಚೂನಿಯಲ್ಲಿದೆ. ಶಂಸುಲ್ ಉಲಮಾ ಇ.ಕೆ.ಅಬೂಕ್ಕರ್ ಮುಸ್ಲಿಯಾರ್‌ರವರಂತ ಉಲಮಾ ಶಿರೋಮಣಿಗಳು ಸೇವೆ ಸಲ್ಲಿಸಿರುವ ಸಮಸ್ತ ಒಂದು ಧಾರ್ಮಿಕ ಚಳವಳಿಯಾಗಿದೆ ಎಂದರು.

 ಸ್ಥಳೀಯ ಶಾಸಕರೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾನೂ ಮಿತ್ತಬೈಲ್ ಜಮಾಅತ್‌ಗೆ ಸೇರಿದವ. ನನ್ನ ರಾಜಕೀಯ ಜೀವನಕ್ಕೂ ಸುಮಾರು 45 ವರ್ಷ ತುಂಬಿದ್ದು ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಜಮಾಅತ್‌ನಲ್ಲಿ ಸೇವೆ ಸಲ್ಲಿಸತೊಡಗಿ 46 ವರ್ಷಗಳು ಕಳೆದವು. 45 ವರ್ಷಗಳಿಂದ ನಾನು ಉಸ್ತಾದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಉಸ್ತಾದ್‌ರವರಲ್ಲಿ ತುಂಬಿರುವ ಆದ್ಯಾತ್ಮಿಕತೆ, ಜಾತ್ಯಾತೀತ ಸಿದ್ದಾಂತ, ಬದ್ಧತೆ, ಸರಳತೆ, ವಿನಯತೆ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಸಮಸ್ತದ ಉಪಾಧ್ಯಕ್ಷರಾಗಿ ಆದ ಆಯ್ಕೆ ಅವರ ಯೋಗ್ಯತೆಗೆ ಸಂದ ಗೌರವವಾಗಿದೆ ಎಂದರು.

ಸಣ್ಣಪುಟ್ಟ ವಿಷಯಗಳಿಗೆ ಯುವಕರು ಪರಸ್ಪರ ಕಾದಾಡಬಾರದು. ಹಿರಿಯರು, ಧರ್ಮಗುರುಗಳು ತೋರಿಸಿಕೊಟ್ಟ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ ಅವರು ಈ ಭಾಗದ ಶಾಸಕನಾಗಿ ಇಲ್ಲಿ ನಿರ್ಮಾಣವಾಗುತ್ತಿರುವ ಶಾದಿ ಮಹಲ್ ಹಾಗೂ ಮಿತ್ತಬೈಲ್ ಜಮಾಅತ್‌ನ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್‌ರವರನ್ನು ಮಿತ್ತಬೈಲ್ ಜುಮಾ ಮಸೀದಿ, ಅಧೀನ ಮದರಸ ಕಮಿಟಿ ಸಹಿತ ಜಮಾಅತ್ ವ್ಯಾಪ್ತಿಯ 18 ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಂಜೆಎಂ ಮಿತ್ತಬೈಲ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮವನ್ನು ಅಸೈಯದ್ ಅಬ್ದುಲ್ ರಶೀದಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಿದರು. ಮಿತ್ತಬೈಲ್ ಜುಮಾ ಮಸೀದಿಯ ಅಧ್ಯಕ್ಷ ಹಬೀಬುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಅಲೀ ತಂಙಳ್ ಕುಂಬೋಳ್, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಅಸೈಯದ್ ಅಮೀರ್ ತಂಙಳ್ ಕಿನ್ಯ, ಅಲ್‌ಹಾಜ್ ಎಂ.ಎ.ಖಾಸಿಂ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಧ್ಯಕ್ಷ ಪ್ರೊಫೆಸರ್ ಅನೀಸ್ ಕೌಸರಿ, ದ.ಕ. ಸಮಸ್ತ ಮುಶಾವರದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ, ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಶರೀಫ್, ಸದಾಶಿವ ಬಂಗೇರ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಮಿತ್ತಬೈಲ್ ಮಸೀದಿ ಕೋಶಾಧಿಕಾರಿ ಇಬ್ರಾಹೀಂ ಬೊಗೋಡಿ, ಅಲಿ ಮದ್ದ, ಸೈಯದ್ ಫಲಿಲ್ ತಂಙಳ್, ಅಬ್ದುಲ್ ಹಮೀದ್, ಯೂಸುಫ್ ಮುಂಡೋಳಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ಮಿತ್ತಬೈಲ್ ಸಹಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ ಸ್ವಾಗತಿಸಿದರು. ಮಿತ್ತಬೈಲ್ ಮದರಸ ಸದರ್ ಮುಅಲ್ಲಿಂ ಎ.ಎಚ್.ಅಬ್ದುಲ್ ಹಮೀದ್ ದಾರಿಮಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News