ಏಕಾಗ್ರತೆ ಮತ್ತು ಧ್ಯಾನದಿಂದ ಪ್ರಪಂಚವನ್ನು ಗೆಲ್ಲಲು ಸಾಧ್ಯ: ಶ್ರೀಕೃಷ್ಣ ಉಪಾಧ್ಯಾಯ
ಸುಳ್ಯ, ಫೆ.27: ಮನುಷ್ಯನ ಜೀವನದಲ್ಲಿ ಮಹತ್ವದ ಗಟ್ಟ ಏಕಾಗ್ರತೆ ಮತ್ತು ಧ್ಯಾನ. ದೇವಸ್ಥಾನ, ಪೂಜೆ ಪುರಸ್ಕಾರಗಳು ಇದರುವುದು ಜ್ಞಾನ ಮತ್ತು ಸಂಸ್ಕಾರ ಕೊಡುವ ಕೇಂದ್ರ. ಶರೀರ ಶಾಶ್ವತ ಅಲ್ಲ. ಶರೀರ ಸುಖ ಮುಖ್ಯ ಅಲ್ಲ. ಶರೀರದ ಒಡಲಲ್ಲಿ ತುಂಬಿರುವ ಜೀವ ಸುಖ ಮುಖ್ಯ. ಅದಕ್ಕೆ ಶಾಶ್ವತ ಸುಖ ಕೊಡಬೇಕಾಗಿದೆ. ಪ್ರಪಂಚದಲ್ಲಿ ಎಲ್ಲವೂ ಭಗವಂತನ ಸಂಕಲ್ಪ. ಭಗವಂತನ ಸಂಕಲ್ಪ ಇಲ್ಲದೆ ಒಂದು ಹುಲ್ಲುಕಡ್ಡಿ ಅಲಗಾಡದು. ಎಲ್ಲವೂ ಭಗವಂತನ ಲೀಲೆ. ಅದುವೇ ಸತ್ಯ ಎಂದು ಸಂಸ್ಕಾರ ಭಾರತಿಯ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿ ಅಡ್ಕಾರು ಇಲ್ಲಿನ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಂಜನಾದ್ರಿ ಪುರಸ್ಕಾರ- 2017 ಪ್ರಧಾನ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ, ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಶಿವರಾಮ ರೈ ಕುರಿಯಾ ವಹಿಸಿದರು. ಈ ಸಂದರ್ಭದಲ್ಲಿ ಅಂಜನಾದ್ರಿ ಪುರಸ್ಕಾರವನ್ನು ನಿವೃತ್ತಯೋಧ ಅಡ್ಡಂತಡ್ಕ ದೇರಣ್ಣ ಗೌಡ ಮತ್ತು ಉಮ್ಮರ್‌ಗಾಂವ ಎಪಾರೆಲ ವೆಲ್‌ಫೇರ್ ಎಸೋಸಿಯೇಶನ್ ಮೆಂಬರ್ ಆಫ್ ಐ.ಎಸ್.ಡಿ.ಎಸ್. ಕಮಿಟಿ, ಮಿನಿಸ್ಟ್ರಿ ಆಫ್ ಟೆಕ್ಸ್‌ಟೈಲ್ಸ್ ಭಾರತ ಸರಕಾರ, ಗುಜರಾತ್ ಇದರ ಅಧ್ಯಕ್ಷ ಆರ್.ಕೆ.ನಾಯರ್ ಇವರಿಗೆ ನೀಡಿ ಗೌರವಿಸಲಾಯಿತು.
ಪ್ರಧಾನ ಅಭ್ಯಾಗತರಾಗಿ ಸುಳ್ಯ ಶ್ರೀ ಚೆನ್ನಕೇಶವ ದೇವಳದ ಅನುವಂಶಿಕ ಮೊಕ್ತೇಸರ ಡಾ ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯಿತಿ ಸದಸ್ಯ ತೀರ್ಥರಾಮ ಜಾಲ್ಸೂರು ಭಾಗವಹಿಸಿದರು.
ವೇದಿಕೆಯಲ್ಲಿ ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷೆ ದಿನೇಶ್ ಅಡ್ಕಾರು, ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ದಯಾನಂದ ರೈ, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ ಅಡ್ಕಾರು ಪದವು, ಉಪಾಧ್ಯಕ್ಷ ನಾಗೇಶ್ ಅಡ್ಕಾರು, ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜ ಸೇವಾ ಸಮಿತಿ ಗೌರವಾಧ್ಯಕ್ಷ ಶಿವರಾಮ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕಜೆಗದ್ದೆ, ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್, ಸುದೀಂದ್ರ ಭಟ್ ಪಯನೀರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಭಜನಾತಂಡದ ಅಕಿಲೇಶ್ ಅಡ್ಕಾರ್‌ಪದವು,ಜಯರಾಮ ಅಡ್ಕಾರ್ ಪದವು, ಲಕ್ಷ್ಮೀಶ ಕೋನಡ್ಕಪದವು ಇವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಕಮಲಾಕ್ಷ ನಂಗಾರು ಮತ್ತು ಶ್ರೀದೇವಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಫೆ.26ರಂದು ಬೆಳಗ್ಗೆ ಹಸಿರುವಾಣಿ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ನಂತರ ಶ್ರೀ ಗುಳಿಗರಾಜನಿಗೆ ವಿಶೇಷ ರಜತ ಶಿರಾಭರಣ ಸಮರ್ಪಣೆ, ರಾತ್ರಿ ರಂಗಪೂಜೆ, ಅನ್ನ ಸಂತರ್ಪಣೆ ಜರುಗಿತು. ಬಳಿಕ ಕಲಾಕೇಸರಿ ಜಾಲ್ಸೂರು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.