ಕಲ್ಯಾಣಪುರ: ಪಾಸ್‌ಪೋರ್ಟ್ ಸರ್ವಿಸ್ ಮೇಳ
Update: 2017-02-27 19:33 IST
ಉಡುಪಿ, ಫೆ.27: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಂಘದ ವತಿಯಿಂದ ಉಡುಪಿಯ ಪಾರ್ಚ್ಯುನ್ ಸರ್ವಿಸ್‌ನ ಸಹಯೋಗ ದೊಂದಿಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ಪಾಸ್‌ಪೋರ್ಟ್ ಸರ್ವಿಸ್ ಮೇಳವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮೇಳವನ್ನು ಪಾರ್ಚ್ಯುನ್ ಸರ್ವಿಸಸ್‌ನ ಪ್ರಾಂಶುಪಾಲೆ ಅಕ್ಷತಾ ಕಿರಣ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ವಹಿಸಿದ್ದರು.
ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ.ಹೆರಾಲ್ಡ್ ಮೊನಿಸ್, ವಾಣಿಜ್ಯಶಾಸ್ತ್ರ ಸಂಘದ ಸಂಯೋಜಕಿ ಅನುಷಾ ಡಿಸೋಜ, ವಿದ್ಯಾರ್ಥಿ ನಾಯಕರಾದ ಪ್ರತೀಕ್ ಶೆಟ್ಟಿ, ಮಿಶೆಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಸುಮಾರು 100 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರು.