×
Ad

ಉಡುಪಿ: ಹಾವಂಜೆಯ ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ

Update: 2017-02-27 20:36 IST

ಉಡುಪಿ, ಫೆ.27: ಹಾವಂಜೆ ಗೋಳಿಕಟ್ಟೆಯ ಮುಗ್ಗೆರಗುಜ್ಜಿ ಎಂಬಲ್ಲಿ ಸುಮಾರು 20 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಒಂಟಿಯಾಗಿ ಮನೆಯಲ್ಲಿ ತೀರಾ ಚಿಂತಾಜನಕ ಪರಿಸ್ಥಿತಿಯಲ್ಲಿ ವಾಸವಾಗಿದ್ದ ಸುಂದರಿ ಶೆಟ್ಟಿ(65) ಎಂಬವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

 ಸ್ಥಳಿಯರಾದ ನಾಗರಾಜ ಹೆಗ್ಡೆ ಎಂಬವರು ಇವರ ಬಗ್ಗೆ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಫೆ.23ರಂದು ನಿತ್ಯಾನಂದ ಒಳಕಾಡು, ಸುಂದರಿ ಶೆಟ್ಟಿ ಮನೆಗೆ ತೆರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ಯಾರು ವಾರೀಸುದಾರರಿಲ್ಲದ ಕಾರಣ ಮನೆ ಸಮೀಪದ ಲೀಲಾವತಿ ಎಂಬವರು ಕಳೆದ 3 ವರ್ಷಗಳಿಂದ ಉಚಿತ ಆಹಾರ ನೀಡುತ್ತಿದ್ದರು.

ಈ ಪರಿಸ್ಥಿತಿಯಲ್ಲಿ ಸುಂದರಿ ಶೆಟ್ಟಿಯವರಿಗೆ ಸಂಬಂಧಿಕರ ಸಹಕಾರ ಅಗತ್ಯವಿದ್ದು, ಸಂಬಂಧಿಕರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಅವರನ್ನು ಸಂಪರ್ಕಿಸಬೇಕೆಂದು ನಿತ್ಯಾನಂದ ಒಳಕಾಡು ವಿನಂತಿಸಿಕೊಂಡಿದ್ದಾರೆ.

ಸುಂದರಿಯನ್ನು ಆಸ್ಪತ್ರೆಯ ಸಿಬ್ಬಂದಿ ವಿಮಲಾ ಮತ್ತು ಜಯಶ್ರೀ ನೋಡಿಕೊಂಡಿದ್ದಾರೆ. ಸ್ಥಳಿರಾದ ನಾಗರಾಜ ಶೆಟ್ಟಿ, ರವಿ, ಅಭೀಬ್, ಹರೀಶ ಶೆಟ್ಟಿ, ಅರ್ಜುನ, ಪ್ರಸಾದ ಶೆಟ್ಟಿ, ಸದಾನಂದ ಶೆಟ್ಟಿ ಮೊದಲಾದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News