ಹೆಬ್ರಿ: ಮಕ್ಕಳ ಕಲಿಕೋತ್ಸವ ಉದ್ಘಾಟನೆ
Update: 2017-02-27 20:47 IST
ಹೆಬ್ರಿ, ಫೆ.27: ಹೆಬ್ರಿಯ ಇಂದಿರಾ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ಕಲಿಕೋತ್ಸವ ನಡೆಯಿತು. ಉಡುಪಿ ಜಿಪಂ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಉದ್ಘಾಟಿಸಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ಎಚ್.ಸುಧಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮುರಳೀಧರ್ ಮಾಹಿತಿ ನೀಡಿದರು.
ಕಾರ್ಕಳ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ, ಜಿಲ್ಲಾ ಸಂಘದ ರಮಾನಂದ ಶೆಟ್ಟಿ, ಸತೀಶ್ಚಂದ್ರ ಬಾಬು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಗಂಗಾಧರ ರಾವ್, ಗ್ರಾಪಂ ಸದಸ್ಯರಾದ ಸುರೇಶ ಭಂಡಾರಿ, ಮಾಲಿನಿ, ಹೆಬ್ರಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಮರಕಾಲ, ಗುತ್ತಿಗೆದಾರ ಎಚ್.ಶ್ರೀಧರ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣಪತಿ ಮರಕಾಲ, ಮುಖ್ಯ ಶಿಕ್ಷಕ ರಾಮಾಂಜನೇಯ ಮೊದಲಾದವರು ಉಪಸ್ಥಿತರಿದ್ದರು.