×
Ad

ಪುತ್ತೂರು: ವಿಜ್ಞಾನ ದಿನದ ಪ್ರಯುಕ್ತ ಫೆ.28ಕ್ಕೆ ಜಾದೂ ಪ್ರದರ್ಶನ

Update: 2017-02-27 20:53 IST

ಪುತ್ತೂರು: ‘ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಫೆ.28ರಂದು ಪಿಲಿಕುಳದ ಬಯಲುರಂಗಮಂದಿರದಲ್ಲಿ ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಕುಶಮಾ ಪರ್ವಿನ್ ತಾಜ್ ನಿರ್ದೇಶನದ ಕಲಾಸೃಷ್ಠಿತಂಡದವರಿಂದ ವೈವಿಧ್ಯಮಯ ಜಾದೂ ಪ್ರದರ್ಶನ ನಡೆಯಲಿದೆ.

 ಕಾರ್ಯಕ್ರಮದ ಅಂಗವಾಗಿ, ಬ್ಯಾರೀಸ್ ಇನ್ಸ್‌ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿ ಮಂಗಳೂರು ಇದರ ಪ್ರೋಫೆಸರ್, ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಪರ್ವಿನ್ ತಾಜ್ ಇವರಿಂದ ಎಜ್ಯು ಮ್ಯಾಜಿಕ್ ಕಿಚನ್ ಮ್ಯಾಜಿಕ್ ಹಾಗೂ ತಂಡದ ಕಿರಿಯ ಜಾದೂಗಾರ ಅಂಬಿಕಾ ಬಾಲ ವಿದ್ಯಾಲಯದ 2ನೇ ತರಗತಿಯ ವಿದ್ಯಾರ್ಥಿ ಪುಟಾಣಿ ರೋಶನ್ ಶರೀಫ್ ಇವರಿಂದ ವಿಶಿಷ್ಟ ಮಕ್ಕಳ ಜಾದೂ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಜಾದೂಗಾರ ಮನೋಜ್ ಮೇರಾಲ ಬೆಳ್ತಂಗಡಿ ಮತ್ತು ಶಮಾ ಪರ್ವಿನ್ ತಾಜ್ ಇವರಿಂದ ವೈವಿಧ್ಯಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News