ಪಡುಬಿದ್ರೆ: ಸಂಘ ಪರಿವಾರದ ಕಾರ್ಯಕರ್ತರಿಂದ ಯುವಕನಿಗೆ ಹಲ್ಲೆ
Update: 2017-02-27 21:23 IST
ಪಡುಬಿದ್ರೆ, ಫೆ.27: ಮುದರಂಗಡಿ ಗಲಭೆಗೆ ಸಂಬಂಧಿಸಿದಂತೆ ಸಂಘ ಪರಿವಾರದ ಕಾರ್ಯಕರ್ತರು ಎಲ್ಲೂರಿನ ಯುವಕನೋರ್ವನಿಗೆ ಹಲ್ಲೆ ನಡೆಸಿರುವ ಘಟನೆ ಫೆ.26ರಂದು ನಡೆದಿದೆ.
ಹಲ್ಲೆಗೆ ಒಳಗಾಗಿರುವ ಎಲ್ಲೂರಿನ ಫಕೀರ್ ಅಹ್ಮದ್ ಎಂಬವರ ಮಗ ಶೇಕ್ ಮುನಾಫ್(20) ಎಂಬವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಚಾಲಕ ವೃತ್ತಿ ಮಾಡುತ್ತಿರುವ ಮುನಾಫ್ ಪಣಿಯೂರು ಎಂಬಲ್ಲಿ ತನ್ನ ಬೈಕಿನಲ್ಲಿ ಹೋಗುತ್ತಿದ್ದಾಗ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಕಿರಣ್, ಶರಣ್, ಪ್ರಸಾದ್ ಸೇರಿದಂತೆ ಒಟ್ಟು 7 ಮಂದಿ ಬಲತ್ಕಾರವಾಗಿ ಎಲ್ಲೂರಿನ ಯುವಕ ಮಂಡಲದ ಬಳಿ ಕರೆದು ಕೊಂಡು ಹೋಗಿ ಕೈ ಹಾಗೂ ಸೊಂಟೆಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.