×
Ad

ಉಡುಪಿ: ಬೈಕ್ ಸವಾರನಿಂದ ಟ್ರಾಫಿಕ್ ಪೊಲೀಸರಿಗೆ ಹಲ್ಲೆ

Update: 2017-02-27 21:31 IST
ಸಾಂದರ್ಭಿಕ ಚಿತ್ರ

ಉಡುಪಿ, ಫೆ.27: ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ನೊಬ್ಬ ಉಡುಪಿ ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿ ರುವ ಘಟನೆ ಫೆ.26ರಂದು ಸಂಜೆ 6:30ರ ಸುಮಾರಿಗೆ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.

 ಉಡುಪಿ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮ್ರಾವ್ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಶರತ್ ಪೂಜಾರಿ ಎಂಬಾತ ತನ್ನ ಕೆಎ-20-ಈಎಂ1393 ನಂಬರಿನ ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಉಡುಪಿಯಿಂದ ಸಂತೆಕಟ್ಟೆ ಬರುತ್ತಿದ್ದನು.
ಆಗ ಪೊಲೀಸರು ಬೈಕ್ ನಿಲ್ಲಿಸಲು ಸೂಚನೆ ನೀಡಿದರೂ ಆತ ಅತಿವೇಗದಿಂದ ಬಂದು ಬೈಕ್ ಸಮೇತ ರಸ್ತೆಗೆ ಬಿದ್ದ.

ನಂತರ ಅಲ್ಲಿಂದ ಎದ್ದು ಬಂದು ಪೊಲೀಸ್ ಸಿಬ್ಬಂದಿಯವರ ಕೈಯನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ಧ ಗಳಿಂದ ಬೈದು, ಇತರರನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿ ಅಕ್ರಮ ಕೂಟ ಸೇರಿಸಿದನು.

ಅಲ್ಲದೆ ಸರಕಾರಿ ಕರ್ತವ್ಯ ಮಾಡಲು ಅಡ್ಡಿಪಡಿಸಿ ಹಲ್ಲೆ ಮಾಡಿ, ಸಾರ್ವ ಜನಿಕರ ಅಕ್ರಮ ಕೂಟ ಸೇರಿಸಿ ರಸ್ತೆ ಮಧ್ಯೆ ಜನರೊಂದಿಗೆ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದಾನೆ ಎಂದು ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮ್ ರಾವ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News