×
Ad

ಸಸಿಹಿತ್ಲು ಗ್ರಾಮಕ್ಕೆ ಉಚಿತ ಅಂಬ್ಯುಲೆನ್ಸ್ ಕೊಡುಗೆ

Update: 2017-02-27 21:57 IST

ಸುರತ್ಕಲ್, ಫೆ. 27: ಸಸಿತ್ಲು ಮತ್ತು ಮುಕ್ಕ ಗ್ರಾಮಸ್ಥರ ತುರ್ತು ಆರೋಗ್ಯಕ್ಕೆ ದಿನದ 24 ಗಂಟೆ ಸ್ಪಂದಿಸುವ ನಿಟ್ಟಿನಲ್ಲಿ ಮುಕ್ಕ ಸೀ ಫುಡ್ ಪ್ರೈ.ಲಿ. ಸಂಸ್ಥೆ ಕೊಡುಗೆಯಾಗಿ ನೀಡಿರುವ ಮತ್ತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಸಿಹಿತ್ಲುವಿನ ವಿಜೇತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಭಾಗಿತ್ವದಲ್ಲಿ ನಿರ್ವಹಿಸಲ್ಪಡುವ ಈ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾ ಅನಾವರಣಗೊಳಿಸಿದರು.

ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ.ಕರ್ಕೇರಾ ವಹಿಸಿದ್ದರು. ಮುಕ್ಕ ಸೀ ಫುಡ್‌ನ ನಿರ್ದೇಶಕ ಕೆ. ಮುಹಮ್ಮದ್ ಹಾರಿಸ್‌ಬುಲೆನ್ಸ್‌ನ ಕೀಯನ್ನು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಮುಕ್ಕ ಸೀ ಫುಡ್‌ನ ಇನ್ನೋರ್ವ ನಿರ್ದೇಶಕ ಮುಹಮ್ಮದ್ ಅಲ್ತಾಫ್, ಕದಿಕೆ ಮೊಗೇರ ಸಭಾದ ಅಧ್ಯಕ್ಷ ವಿಠಲ ಬಂಗೇರಾ, ಈ ಸಂದರ್ಭದಲ್ಲಿ ಹಾರಿಸ್‌ರನ್ನು ಸನ್ಮಾನಿಸಲಾಯಿತು.

ಅನುವಂಶಿಕ ಆಡಳಿತ ಮೊಕ್ತೇಸರರಾದ ಪಠೇಲ್‌ಯಾದವ ಜಿ.,ಶ್ರೀನಿವಾಸ ಯಾನೇಅಪ್ಪು ಪೂಜಾರಿ, ರಮಾನಾಥ ರೈ ಬೀಡಿನ ಮನೆ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ರೇವತಿ ಪುತ್ರನ್, ಸುರತ್ಕಲ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಕುಮಾರೇಶ್ವರನ್, ಮುಕ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಲತೀಫ್, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್‌ಕುಮಾರ್ ಬಿ.ಎನ್., ಮುಡಾ ಸದಸ್ಯ ವಸಂತ ಬೆರ್ನಾಡ್, ಮೊಗೇರ ಮಹಾಸಭಾದ ನಾಗೇಶ್ ಬಂಗೇರಾ, ರವೀಂದ್ರ, ಮೋಹನ್ ಶೆಟ್ಟಿಗಾರ್, ಚಂದ್ರಶೇಖರ್ ನಾನಿಲ್, ಧನ್‌ರಾಜ್ ಕೋಟ್ಯಾನ್, ಪುರುಷೋತ್ತಮ ದೇವಾಡಿಗ ಮುಕ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ರಮೇಶ್ ಪೂಜಾರಿ ಚೇಳಾರು ಸ್ವಾಗತಿಸಿದರು. ಶೈಲೇಶ್‌ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News