×
Ad

ಪುಣೆಯಲ್ಲಿ ಜಂಟಿ ವೀಸಾ ಕೇಂದ್ರ ಆರಂಭ

Update: 2017-02-27 22:01 IST

 ಮುಂಬೈ,ಫೆ.27: ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯ ನೂತನ ಜಂಟಿ ವೀಸಾ ಅರ್ಜಿ ಕೇಂದ್ರ ಸೋಮವಾರ ಪುಣೆಯಲ್ಲಿ ಆರಂಭಗೊಂಡಿದ್ದು, ಇಲ್ಲಿ ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರಿಯ,ಗ್ರೀಸ್, ಲಾಟ್ವಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

  ಈ ಕೇಂದ್ರದಲ್ಲಿ ಇತರ 15 ಸ್ಕಾಂಡಿನೇವಿಯನ್ ದೇಶಗಳಾದ ಸ್ವೀಡನ್,ಸ್ವಿಸ್, ಪೋರ್ಚುಗಲ್, ಬೆಲ್ಜಿಯಂ, ಡೆನ್ಮಾರ್ಕ್, ಹಂಗರಿ, ನಾರ್ವೆ, ಲಕ್ಸೆಂಬರ್ಗ್, ಸೈಪ್ರಸ್ ಹಾಗೂ ಎಸ್ತೋನಿಯಾ ದೇಶಗಳಿಗೂ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

 ಇದರ ಜೊತೆ ಆಸ್ಟ್ರೇಲಿಯ, ಬ್ರಿಟನ್, ಐಯರ್‌ಲ್ಯಾಂಡ್,ಕೆನಡ,ಅಮೆರಿಕ, ಮಲೇಶ್ಯ, ದ.ಆಫ್ರಿಕ, ಟರ್ಕಿ ಹಾಗೂ ಯುಎಇಗಳಿಗೂ ವೀಸಾ ಸೇವೆಯನ್ನು ಒದಗಿಸಲಿದೆ. ನೂತನ ಜಂಟಿ ವೀಸಾ ಕೇಂದ್ರದ ಆರಂಭದೊಂದಿಗೆ, ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯು ವಿವಿಧ ದೇಶಗಳ ವೀಸಾ ಅವಶ್ಯಕತೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆಯೆಂದು , ಸಂಸ್ಥೆಯ ಮಧ್ಯಪ್ರಾಚ್ಯ ಹಾಗೂ ದ.ಏಶ್ಯಕ್ಕಾಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News