ಮಂಗಳೂರು: ಮುಂಬಯಿ ಕೊಚ್ಚಿನ್ ವಿಮಾನ ತುರ್ತು ಭೂ ಸ್ಪರ್ಷ
Update: 2017-02-27 22:07 IST
ಮಂಗಳೂರು, ಫೆ.27: ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಂಬಯಿ - ಕೊಚ್ಚಿನ್ ವಿಮಾನ ತುರ್ತು ಭೂಸ್ಪರ್ಷ ಮಾಡಿದೆ.
58 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಮುಂಬಯಿಯಿಂದ ಕೊಚ್ಚಿನ್ ಗೆ ಹೊರಟಿತ್ತು. ಮಾರ್ಗಮಧ್ಯ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಷ ಮಾಡಿದೆ.
ಎಲ್ಲ 58 ಪ್ರಯಾಣಿಕರನ್ನು ಹೊಟೇಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಭೂ ಸ್ಪರ್ಷಗೊಂಡ ನಂತರ ಸಿಬ್ಬಂದಿ ತಾಂತ್ರಿಕ ದೋಷ ಸರಿ ಪಡಿಸುತ್ತಿರುವುದಾಗಿ ವರದಿಯಾಗಿದೆ. ನಾಳೆ ಕೊಚ್ಚಿನ್ ಗೆ ಹೊರಡಲಿದೆ ಎಂದು ತಿಳಿದು ಬಂದಿದೆ.