×
Ad

ಉ.ಪ್ರ:ಐದನೇ ಹಂತದ ಚುನಾವಣೆ ಶೇ.57.36 ಮತದಾನ

Update: 2017-02-27 23:27 IST

ಲಕ್ನೋ,ಫೆ.27: ಬಿಗು ಬಂದೋಬಸ್ತ್ ನಡುವೆ ಸೋಮವಾರ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಐದನೇ ಹಂತದ ಚುನಾವಣೆಯಲ್ಲಿ 1.81 ಕೋ.ಮತದಾರರ ಪೈಕಿ ಶೇ.57.36ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಮೇಥಿ ಮತ್ತು ಫೈಝಾಬಾದ ಕ್ಷೇತ್ರಗಳು ಹೆಚ್ಚಿನ ಗಮನ ಸೆಳೆದಿದ್ದವು.
ರಾಜ್ಯದ 11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಹೆಚ್ಚುಕಡಿಮೆ ಶಾಂತಿಯುತವಾಗಿತ್ತು.
 ಸಂಜೆ ಐದು ಗಂಟೆಯವರೆಗೆ ಶೇ.57.36ರಷ್ಟು ಮತದಾನವಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಇನ್ನೂ ಸರದಿ ಸಾಲಿನಲ್ಲಿದ್ದ ಹಿನ್ನೆಲೆಯಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಬಹುದು ಎಂದು ಉ.ಪ್ರ.ಮುಖ್ಯ ಚುನಾವಣಾಧಿಕಾರಿ ಟಿ.ವೆಂಕಟೇಶ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News