×
Ad

ಹುತಾತ್ಮ ಯೋಧನ ಪುತ್ರಿಗೆ ಅವಮಾನ : ಕೇಂದ್ರ ಸಚಿವರ ವಿರುದ್ಧ ಜಾವೇದ್ ಅಖ್ತರ್ ವಾಗ್ದಾಳಿ

Update: 2017-02-28 12:32 IST

ಹೊಸದಿಲ್ಲಿ, ಫೆ.28: ‘‘ಆಕೆಯ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಸಚಿವರೇ ನಿಮ್ಮ ಮನಸ್ಸನ್ನು ಯಾರು ಕೆಡಿಸುತ್ತಿದ್ದಾರೆಂದು ನನಗೆ ಗೊತ್ತು.’’ ಕೇಂದ್ರ ಸಚಿವ ಕಿರೆಣ್ ರಿಜಿಜು ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಖಾನ್ ಅವರ ಫೇಸ್ ಬುಕ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿ ನೀಡಿದ್ದ ಹೇಳಿಕೆಗೆ ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಮೇಲಿನಂತೆ ತಿರುಗೇಟು ನೀಡಿದ್ದಾರೆ. ‘‘ನಿಮ್ಮ ಮನಸ್ಸನ್ನು ಯಾರು ಕೆಡಿಸುತ್ತಿದ್ದಾರೆಂದು ನನಗೆ ತಿಳಿದಿದೆ’’ ಎಂದು ರಿಜಿಜು ಆಕೆಗೆ ಟ್ವೀಟ್ ಮಾಡಿದ್ದರು.

‘‘ಕೆಲ ಜನರು ತಮಗೆ ಭಾರತದಲ್ಲಿ ಸ್ವಾತಂತ್ರ್ಯ ಬೇಕೆಂದು ಹೇಳುತ್ತಿದ್ದಾರೆ. ನೆರೆಯ ದೇಶಗಳಲ್ಲಿ ಹಿಂಸೆ ಎದುರಿಸಿ ಭಾರತದಲ್ಲಿ ಆಶ್ರಯ ಪಡೆದಿರುವವರ ಮಾತುಗಳನ್ನು ಕೇಳಿ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ದೇಶವಿರೋಧಿ ಘೋಷಣೆಗಳನ್ನು ಕೂಗುವುದಲ್ಲ. ಸರಕಾರವನ್ನು ಟೀಕಿಸಿ ಆದರೆ ತಾಯ್ನೆಲವನ್ನು ನಿಂದಿಸಬೇಡಿ’’ ಎಂದಿದ್ದರು.

ತನ್ನ ಪೋಸ್ಟ್ ನಿಂದ ಉಂಟಾದ ವಿವಾದದಿಂದ ಬೇಸತ್ತು ವಿದ್ಯಾರ್ಥಿನಿ ತಾನು ಈ ಅಭಿಯಾನದಿಂದ ಹೊರಬರುವುದಾಗಿ ಹೇಳಿಕೊಂಡಿದ್ದಾರೆ.‘‘ನನ್ನನ್ನು ಒಂಟಿಯಾಗಿ ಬಿಟ್ಟುಬಿಡಿ. ನನಗೆ ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ಬಹಳಷ್ಟು ಅನುಭವಿಸಿದ್ದೇನೆ. 20 ವರ್ಷದ ನಾನು ಇಷ್ಟು ಮಾತ್ರ ಸಹಿಸಬಲ್ಲೆ,’’ ಎಂದು ಅವರು ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News