ಕಂದಕಕ್ಕೆ ಉರುಳಿದ ಪಿಕ್ ಅಪ್ ವಾಹನ; ಇಬ್ಬರ ಸಾವು
Update: 2017-02-28 14:17 IST
ಮಂಗಳೂರು, ಫೆ.28: ಪಿಕ್ ಅಪ್ ವಾಹನವೊಂದು ಗುಂಡ್ಯಾ ಸಮೀಪದ ಶಿರಾಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪಿಕ್ ಅಪ್ ನಲ್ಲಿದ್ದ ವಿಕಾಸ್ (26) ಹಾಗೂ ಆಶಿಕ್(25) ಎಂಬವರು ಮೃತಪಟ್ಟಿದ್ದಾರೆ.
ಶಿರಾಡಿ ಸುರಂಗಮಾರ್ಗ ಸರ್ವೇ ನಡೆಸುತ್ತಿದ್ದ ಪಿಕ್ ಅಪ್ ವಾಹನ ಸುಮಾರು 60 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ವಿಕಾಸ್ ಮತ್ತು ಆಶಿಕ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.