×
Ad

ಇರಾ ಸೈಟ್: ರಿಫಾಯಿ ಅನುಸ್ಮರಣೆ ಹಾಗೂ ಸಂಘಟನಾ ತರಗತಿ

Update: 2017-02-28 14:55 IST

ಮುಡಿಪು, ಫೆ.28: ಎಸ್ಸೆಸೆಫ್ ಇರಾ ಸೈಟ್ ಶಾಖೆಯ ಆಶ್ರಯದಲ್ಲಿ ರಿಫಾಯಿ ಶೈಖ್(ಖ.ಸಿ)ಅನುಸ್ಮರಣೆ ಹಾಗೂ ಸಂಘಟನಾ ತರಗತಿ ನಡೆಯಿತು

ಇರಾ ಸೈಟ್ ಶಾಖೆಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಡಿಪು ಸೌತ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಇರಾ ಸೈಟ್ ಶಾಖೆ ಇದರ ಉಸ್ತುವಾರಿ ಹಾಗೂ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮನಾಝಿರ್ ಮಾಸ್ಟರ್ ಪ್ರಾಸ್ತಾವಿಕ ಭಾ‌ಷಣ ಮಾಡಿದರು. ಮಜ್ಲಿಸ್ ಗಾಣೆಮಾರ್ ಮುದರ್ರಿಸರು, ಯುವ ಲೇಖಕರು ಆದ  ಇಸ್ಮಾಯಿಲ್ ಸಹದಿ ಅಲ್ ಅಫ಼್ಳಲಿ ಮಾಚಾರ್ ಸಂಘಟ ತರಗತಿ ಮತ್ತು ರಿಫ಼ಾಯಿ ಶೈಖ್ ಅನುಸ್ಮರಣಾ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಶಾಖಾ ಉಪಾಧ್ಯಕ್ಷರಾದ ಹೈದರ್ ಇರಾ ಸೈಟ್ ಜೊತೆ ಕಾರ್ಯದರ್ಶಿಗಳಾದ ನಾಸೀರ್ ಇರಾ ಸೈಟ್ ಇಲ್ಯಾಸ್ ಪಿ.ಎ ಇರಾ ಸೈಟ್ ಮತ್ತಿತರರು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಇರಾ ಸೈಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News