×
Ad

ಆರಾಧಾನಾಲಯಗಲ್ಲಿ ಆಯುಧ ತರಬೇತಿ ವಿರುದ್ಧ ಕಾನೂನು ರೂಪಿಸಲಾಗುವುದು: ಪಿಣರಾಯಿ ವಿಜಯನ್

Update: 2017-02-28 15:10 IST

ತಿರುವನಂತಪುರಂ,ಫೆ. 28: ಆರಾಧನಾಲಯಗಳಲ್ಲಿ ಶಸ್ತ್ರ ತರಬೇತಿ ನೀಡುವುದನ್ನು ನಿಯಂತ್ರಿಸಲು ಕಾನೂನನ್ನು ರೂಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆರೆಸ್ಸೆಸ್ ಶಾಖೆಗಳ ಅಧೀನದಲ್ಲಿ ಇಂತಹ ಆಯುಧ ತರಬೇತಿ ವ್ಯಾಪಕವಾಗಿ ನಡೆಯುತ್ತಿದೆ ಎನ್ನುವುದು ನಿಜವಾಗಿದೆ. ಇಂತಹ ತರಬೇತಿಯಿಂದಾಗಿ ಮನುಷ್ಯರ ವಿರುದ್ಧ ದಾಳಿನಡೆಸಿ ಕೊಲ್ಲಲಾಗುತ್ತಿದೆ ಎಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಸದನಕ್ಕೆ ತಿಳಿಸಿದ್ದಾರೆ.

ಆರಾಧನಾಲಯಗಳನ್ನು ಕೇಂದ್ರೀಕರಿಸಿ ಆಯುಧ ತರಬೇತಿ ನೀಡುವುದನ್ನು ತಡೆಯಲು ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ಆರಾಧನಾಲಯಗಳು ಭಕ್ತರ ಕೇಂದ್ರವಾಗಿರಬೇಕು.

ಭಕ್ತರುಆರಾಧನಾಲಯಗಳಿಗೆ ಭಯವಿಲ್ಲದೆ ಹೋಗುವಂತೆಮಾಡಲಾಗುವುದು. ಕೆಲವು ಅಲ್ಪಸಂಖ್ಯಾತ ಮೂಲಭೂತವಾದವೂ ಇದೆ ಎಂದು ಅವರುಈ ವೇಳೆ ತಿಳಿಸಿದ್ದಾರೆ. ಕೊಡುಂಗಲ್ಲೂರ್ ದೇವಳದಲ್ಲಿ ತಪ್ಪಾದ ರೀತಿಯಲ್ಲಿ ಕೆಲವು ಕ್ರಮಗಳು ನಡೆಯುತ್ತಿವೆ. ಹಣವನ್ನು ವಶಪಡಿಸಿಕೊಳ್ಳಲಾಗುತ್ತದೆ. ಆರೆಸ್ಸೆಸ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಇತ್ಯಾದಿ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪದ ಸಂಘಟನೆ ಆರೆಸ್ಸೆಸ್ ಆಗಿದೆ. ಸಂಘಟನೆಯನ್ನು ತೊರೆಯ ಬಯಸುವವರನ್ನು ಮತ್ತು ವಿರುದ್ಧ ಅಭಿಪ್ರಾಯ ಇರುವವರನ್ನು ದಿಗ್ಬಂಧನ ಹಾಕಿ ಆರೆಸ್ಸೆಸ್ ಪೀಡಿಸುತ್ತಿದೆ.ಇಂತಹ ಕೇಂದ್ರಗಳು ರಾಜ್ಯದಲ್ಲಿವೆ ಎಂದು ವಿಷ್ಣು ಎನ್ನುವ ಯುವಕನ ಸಾಕ್ಷ್ಯದಲ್ಲಿ ಬಹಿರಂಗವಾಗಿದೆ. ಇವೆಲ್ಲದರ ವಿರುದ್ಧ ಫಲಪ್ರದವಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News