×
Ad

ಮಂಗಳೂರು: ಮಿಲಿಟರಿ ವಿಮಾನ ತುರ್ತು ಭೂ ಸ್ಪರ್ಶ; ಲ್ಯಾಂಡಿಂಗ್ ವೇಳೆ ಟಯರ್ ಸ್ಫೋಟ

Update: 2017-02-28 18:55 IST

ಮಂಗಳೂರು,ಫೆ.28: ಭಾರತೀಯ ಸೇನೆಗೆ ಸೇರಿದ ವಿಮಾನ ಕೆಂಜಾರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಸಂದರ್ಭ ವಿಮಾನದ ಟಯರ್ ಸ್ಫೋಟಗೊಂಡ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.

ಗೋವಾದಲ್ಲಿ ಪ್ರಯೋಗಾರ್ಥವಾಗಿ ಹಾರಾಟದ ಈ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿದ ಪರಿಣಾಮ ತುರ್ತು ಭೂಸ್ಪರ್ಶ ಮಾಡಿತು.

ಇದರಿಂದ ಸುಮಾರು 5 ಗಂಟೆಗಳ ಕಾಲ ರನ್‌ವೇ ಬಂದ್ ಮಾಡಲಾಗಿದ್ದು, ದೆಹಲಿಯಿಂದ ಮಂಗಳೂರಿಗೆ ಚಲಿಸುತ್ತಿದ್ದ ವಿಮಾನವನ್ನು ಬೆಂಗಳೂರಿಗೆ ಹಾಗು ದುಬೈಯಿಂದ ಮಂಗಳೂರಿಗೆ ಹೊರಟಿದ್ದ ವಿಮಾನವನ್ನು ಕೊಚ್ಚಿಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ ತಿಳಿಸಿದ್ದಾರೆ.

ಸಿಬ್ಬಂದಿ ವರ್ಗವು ವಿಮಾನದ ತಾಂತ್ರಿಕ ದೋಷ ಸರಿಪಡಿಸಿದ್ದು, ಸುಮಾರು 9 ಗಂಟೆಯ ವೇಳೆಗೆ ಮಂಗಳೂರಿನಿಂದ ಗೋವಾ ಕಡೆ ಯಾನ ಬೆಳೆಸಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News