×
Ad

ಉಡುಪಿ: ಮಾ.2-6ರಿಂದ ಮಜ್ಲೀಸ್, ಆತ್ರಾಡಿ ನವೀಕೃತ ಜುಮಾ ಮಸೀದಿ ಉದ್ಘಾಟನೆ

Update: 2017-02-28 19:21 IST

ಉಡುಪಿ, ಫೆ.28: ನವೀಕೃತ ಆತ್ರಾಡಿ ಮುಹ್ಯಿದ್ದೀನ್ ಜುಮಾ ಮಸೀದಿ ಯ ಉದ್ಘಾಟನೆ ಹಾಗೂ ಬೃಹತ್ ಆಧ್ಯಾತ್ಮಿಕ ಮಜ್ಲೀಸ್ ಕಾರ್ಯಕ್ರಮವನ್ನು ಮಾ.2ರಿಂದ 6ರವರೆಗೆ ಹಮ್ಮಿಕೊಳ್ಳಲಾಗಿದೆ.

ಸಮಾರು 60ವರ್ಷಗಳ ಇತಿಹಾಸ ಹೊಂದಿರುವ ಮಸೀದಿಯನ್ನು ಸುಮಾರು 1.5ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಳಿಸಲಾಗಿದೆ ಎಂದು ಮಸೀದಿಯ ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಆತ್ರಾಡಿ ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2ರಂದು ಮಗ್ರಿಬ್ ನಮಾಝ್‌ನ ಬಳಿಕ ಆತ್ರಾಡಿ ಖಾಝಿ ವಿ.ಕೆ.ಅಬೂಬ ಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಹಝ್ರತ್ ಬಾಬಾ ಫಕ್ರುದ್ದೀನ್ ವಲಿಯು ಲ್ಲಾಹಿರವರ ದರ್ಗಾ ಝಿಯಾರತ್ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಜರಗಲಿದೆ. ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ದುವಾ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಹಾಜಿ ಕೆ.ಅಬೂ ಬಕ್ಕರ್ ಪರ್ಕಳ ವಹಿಸಲಿರುವರು.

3ರಂದು ಶುಕ್ರವಾರ ಬೆಳಗ್ಗೆ 11ಗಂಟೆಗೆ ಮಸೀದಿಯ ವಿಸ್ತೃತ ಭಾಗದ ವಕ್ಫ್ ನಿರ್ವಹಣೆ ಕಾರ್ಯಕ್ರಮ ನಡೆಯಲಿದ್ದು, ಅಲ್‌ಹಾಜ್ ಎಂ.ಎ.ಕಾಸಿಂ ಮುಸ್ಲಿಯಾರ್ ಮೊಗ್ರಾಲ್ ಕುಂಬ್ಳೆ ಖುತ್ಬ ನಿರ್ವಹಣೆ ಮಾಡಲಿರುವರು. ಮಗ್ರಿಬ್ ನಮಾಝಿನ ಬಳಿಕ ಕಾರ್ಕಳ ತ್ವಯಿಬಾ ಗಾರ್ಡನ್‌ನ ಶರೀಫ್ ಸಅದಿ ಕಿಲ್ಲೂರು ಧಾರ್ಮಿಕ ಪ್ರವಚನ ನೀಡಲಿರುವರು. ಅಸ್ಸಯ್ಯಿದ್ ಹಾರೂನ್ ತಂಙಳ್ ಅಲ್‌ಬುಖಾರಿ ಭದ್ರಾವತಿ ದುವಾ ನೆರವೇರಿಸಲಿದ್ದಾರೆ.

4ರಂದು ಮಗ್ರಿಬ್ ನಮಾಝಿನ ಬಳಿಕ ಉಚ್ಚಿಲ ಖತೀಬ್ ಇಸ್‌ಹಾಕ್ ಫೈಝಿ ಧಾರ್ಮಿಕ ಪ್ರವಚನ ನೀಡಲಿರುವರು. ಮಾ.5ರಂದು ಅಪರಾಹ್ನ 3ಗಂಟೆಗೆ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಸಂದಲ್ ಮೆರವಣಿಗೆ ಮತ್ತು ಸಲೀಂ ಖಾದ್ರಿ ಉಜಿರೆ ಅವರಿಂದ ನಾತೇ ಶರೀಫ್ ನಡೆಯಲಿದೆ. ಮಗ್ರಿಬ್ ನಮಾಝ್‌ನ ಬಳಿಕ ಸಿದ್ದೀಖಿಯ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಮತ್ತು ಇಶಾ ನಮಾಜಿನ ಬಳಿಕ ಅನ್ವರ್ ಸಾದಾತ್ ಗೂಡಿನಬಳಿ ಅವರಿಂದ ಪ್ರವಚನ ಜರಗಲಿದೆ. ರಾತ್ರಿ 10ಗಂಟೆಗೆ ಬುರ್ದಾ ಹಾಗೂ ನಾತೇ ಶರೀಫ್(ಶುಕೂರು ಇರ್ಫಾನಿ ಚೆಂಬರಿಕ್ಕ, ನಾತ್: ಶಿಹಾನ್ ಮಂಗಳೂರು) ನಡೆಯಲಿದೆ.

6ರಂದು ಮಗ್ರಿಬ್ ನಮಾಝ್‌ನ ಬಳಿಕ ಸ್ವಲಾತ್ ವಾರ್ಷಿಕ ಹಾಗೂ ಸಮಾರೋಪ ಸಮಾರಂಭ ಜರಗಲಿದ್ದು, ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ನೆರವೇರಿಸಲಿರವರು. ಅಸ್ಸಯ್ಯಿದ್ ಇಬ್ನು ವೌಲಾನಾ ತಂಙಳ್ ಚೇಳಕ್ಕಾಡ್ ಆಶೀರ್ವಚನ ನೀಡಲಿರುವರು. ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರ ಉದ್ಘಾಟಿಸಲಿರುವರು. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಭಾಷಣ ಮಾಡಲಿರುವರು.

 ಮುಖ್ಯ ಅತಿಥಿಗಳಾಗಿ ಸಚಿವರಾದ ಪ್ರಮೋದ್ ಮಧ್ವರಾಜ್, ಯು.ಟಿ. ಖಾದರ್, ರಮಾನಾಥ ರೈ, ಶಾಸಕರಾದ ವಿನಯ ಕುಮಾರ್ ಸೊರಕೆ, ಮೊದಿನ್ ಬಾವಾ, ಐವನ್ ಡಿಸೋಜ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಎಂ.ಎ.ಗಫೂರ್ ಮೊದಲಾದವರು ಭಾಗವಹಿಸಲಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ವೆನಿಲ್ಲ, ಉಪಾಧ್ಯಕ್ಷ ಹಾಜಿ ಇದಿನಬ್ಬ ಶಾಲಿಮಾರ್, ಜೊತೆ ಕೋಶಾಧಿಕಾರಿ ಸೈಯ್ಯದ್ ಮದನಿ ಎಕೆಎಂಎಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News