×
Ad

ಉಡುಪಿ: ಕಣ್ಣು ಪರೀಕ್ಷಿಸಿಕೊಂಡ ವೈದ್ಯಕೀಯ ಶಿಕ್ಷಣ ಸಚಿವ

Update: 2017-02-28 19:34 IST

ಉಡುಪಿ, ಫೆ.28: ಮಣಿಪಾಲ ವಿವಿಯ ಕಾರ್ಯಕ್ರಮಕ್ಕೆ ಮಂಗಳವಾರ ಉಡುಪಿಗೆ ಆಗಮಿಸಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಧ್ಯಾಹ್ನ ಉಡುಪಿಯ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿ ತನ್ನ ಕಣ್ಣುಗಳನ್ನು ಪರೀಕ್ಷಿಸಿಕೊಂಡರು.

ಪ್ರಸಾದ್ ನೇತ್ರಾಲಯದ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಯಂತ್ರಗಳನ್ನು ವೀಕ್ಷಿಸಿದ ಸಚಿವರು, ಬಳಿಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಅವರ ಸಲಹೆಯಂತೆ ತನ್ನ ಕಣ್ಣುಗಳನ್ನು ಪರೀಕ್ಷಿಸಿದರು.

ಸ್ವತಃ ಡಾ.ಕೃಷ್ಣಪ್ರಸಾದ್ ಅವರೇ ಕೂತು ಸಚಿವರ ಕಣ್ಣುಗಳ ವಿವಿಧ ಪರೀಕ್ಷೆ ಯನ್ನು ನಡೆಸಿದರು. ಇವರೊಂದಿಗೆ ಡಾ.ಜಾಕಬ್ ಸಹಕರಿಸಿದರು.

ಈ ಸಂದರ್ಭದಲ್ಲಿ ರಾಜೀವ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕಾರ್ ಅಲಿ, ಡಾ.ತನ್ಮಯ ಗೋಸ್ವಾಮಿ, ಆಸ್ಪತ್ರೆಯ ನಿರ್ದೇಶಕರಾದ ರೇಷ್ಮಾ ಕೃಷ್ಣಪ್ರಸಾದ್, ರಘುರಾಮ ರಾವ್, ಡಾ.ಚಿನ್ನಪ್ಪ, ಎಂ.ವಿ. ಆಚಾರ್ಯ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News