×
Ad

ಉಡುಪಿ: ಮನೆಯಂಗಳದಲ್ಲಿ ಕಾರು ಢಿಕ್ಕಿ; ಮಗು ಮೃತ್ಯು

Update: 2017-02-28 21:12 IST

ಉಡುಪಿ, ಫೆ.28: ಮನೆಯಂಗಳದಲ್ಲಿ ಕಾರು ಢಿಕ್ಕಿ ಹೊಡೆದು ಮಗು ಮೃತಪಟ್ಟ ಘಟನೆ ಅಂಬಲಪಾಡಿಯ ಅಂಬಾ ಲೇಔಟ್ ಎಂಬಲ್ಲಿ ಫೆ.27 ರಂದು ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.

ರಿತೇಶ್ ಶ್ರೀಯಾನ್(3) ಮೃತ ಮಗು. ಅಂಬಾ ಲೇಔಟ್‌ನ ಸುಧೀರ್ ಶ್ರೀಯಾನ್ ಮಲ್ಪೆಎಂಬವರ ಮನೆಗೆ ಅವರ ತಮ್ಮ ಮುರಳಿ ಶ್ರೀಯಾನ್ ಎಂಬವರು ತನ್ನ ಕಾರಿನಲ್ಲಿ ಮನೆಯ ಅಂಗಳಕ್ಕೆ ಬರುತ್ತಿರುವಾಗ ಹಾರ್ನ್ ಹಾಕಿದ್ದು, ಇದನ್ನು ಕೇಳಿದ ಮನೆ ಒಳಗಿದ್ದ ಸುಧೀರ್ ಶ್ರೀಯಾನ್‌ರ ಇನ್ನೋರ್ವ ತಮ್ಮನ ಮಗ ರಿತೇಶ್ ಹೊರಗೆ ಅಂಗಳಕ್ಕೆ ಓಡಿ ಬಂದನು.

 ಆಗ ಕಾರು ರಿತೇಶ್ಗೆ ಡಿಕ್ಕಿ ಹೊಡೆಯಿತು. ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಮಗು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿತು.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News