ಕುಂಭಾಶಿ: ಮನೆ ನಿವೇಶನ ರಹಿತರ ಸಮಾವೇಶ
Update: 2017-02-28 21:55 IST
ಕುಂದಾಪುರ, ಫೆ.28: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಕುಂಭಾಶಿ ಗ್ರಾಪಂ ಕಛೇರಿ ಬಳಿ ಅಂಬೇಡ್ಕರ್ ಭವನ ವಠಾರದಲ್ಲಿ ಸೋಮವಾರ ಆಯೋಜಿಸಲಾದ ಮನೆ ನಿವೇಶನ ರಹಿತರ ಬೃಹತ್ ಸಮಾವೇಶವನ್ನು ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡ ಉದ್ಘಾಟಿಸಿದರು.
ಕುಂಭಾಶಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸಂಘದ ಮುಖಂಡರಾದ ಕರಿಯ ದೇವಾಡಿಗ ಕೋಟೇಶ್ವರ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ ಉಪಸ್ಥಿತರಿದ್ದರು.