×
Ad

ಮಾ.1ರಂದು ಇರ್ದೆ ಪಳ್ಳಿತ್ತಡ್ಕಕ್ಕೆ ಯಾಸೀನ್ ಜೌಹರಿ

Update: 2017-02-28 22:08 IST

ಪುತ್ತೂರು: ಇರ್ದೆ- ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ 41 ನೇ ಉರೂಸ್ ಕಾರ್ಯಕ್ರಮದ ಅಂಗವಾಗಿ ನಡೆಯುವ ಧಾರ್ಮಿಕ ಮತಪ್ರಭಾಷಣದಲ್ಲಿ ಮಾ. 1 ರಂದು ಹಾಮಿದ್ ಯಾಸೀನ್ ಜೌಹರಿ ಕಾದಿಸಿಯ್ಯ ಕೊಲ್ಲಂ ರವರು ಪ್ರವಚನ ನೀಡಲಿದ್ದಾರೆ.

ತಂಬುತ್ತಡ್ಕ ಖತೀಬ್ ಆದಂ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾ. 2 ರಂದು ಅನ್ವರ್ ಅಲಿ ಉದವಿ ಕೊಂಡೋಟಿ ಮಲಪ್ಪುರಂ ಪ್ರಭಾಷಣ ಮಾಡಲಿದ್ದಾರೆ.

ಉರೂಸ್ ಕಾರ್ಯಕ್ರಮ ಮಾ. 4 ರಂದು ಸಮಾರೋಪಗೊಳ್ಳಲಿದೆ.

ಉರೂಸ್ ಕಾರ್ಯಕ್ರಮದ ಅಂಗವಾಗಿ ಪಳ್ಳಿತ್ತಡ್ಕ ದರ್ಗಾ ವಠಾರದಲ್ಲಿ ಏಳು ದಿನಗಳ ಬೆಲ್ಲದ ಗಂಜಿಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ ಎಂದು ಕೊರಿಂಗಿಲ ಜಮಾಆತ್ ಕಮಿಟಿ ಹಾಗೂ ಇರ್ದೆ ಪಳ್ಳಿತ್ತಡ್ಕ ಉರೂಸ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News