ಮಂಗಳೂರು: ರಸ್ತೆ ಅಗೆತಕ್ಕೆ ಅನುಮತಿ ಪಡೆಯಲು ಮನಪಾ ಸೂಚನೆ
Update: 2017-02-28 23:29 IST
ಮಂಗಳೂರು, ಫೆ.28: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಸಂಪರ್ಕಕ್ಕಾಗಿ ಪಾಲಿಕೆಯ ಒಪ್ಪಿಗೆ ಪಡೆಯದೆ ಮಣ್ಣಿನ, ಡಾಮಾರು, ಇಂಟರ್‌ಲಾಕ್ ಮತ್ತು ಕಾಂಕ್ರೀಟ್ ರಸ್ತೆ ಅಗೆಯುತ್ತಿರುವುದು ಕೆಎಂಸಿ ಕಾಯ್ದೆಯ ಉಲ್ಲಂಘನೆಯಾಗಿದೆ. ಹೀಗಾಗಿ ಒಳಚರಂಡಿ ಜೋಡಣೆಗಾಗಿ ರಸ್ತೆ ಅಗೆತದ ಅಗತ್ಯವಿದ್ದಲ್ಲಿ ಅರ್ಜಿದಾರರು ಲಿಖಿತ ಅನುಮತಿ ಮತ್ತು ಶುಲ್ಕವನ್ನು ಪಾವತಿಸಿದ ಬಳಿಕ ರಸ್ತೆ ಅಗೆತ ಹಾಗೂ ಒಳಚರಂಡಿ ಜೋಡಣೆ ಮಾಡಬೇಕು.
ಈ ನಿಯಮಾವಳಿಗೆ ವಿರುದ್ಧವಾಗಿ ಅನಧಿಕೃತ ರಸ್ತೆ ಅಗೆತ ಅಥವಾ ಒಳಚರಂಡಿ ಜೋಡಣೆ ಕೈಗೊಂಡಲ್ಲಿ ಅಂತಹ ವ್ಯಕ್ತಿ/ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತರ ಕಚೇರಿಯ ಪ್ರಕಟನೆ ತಿಳಿಸಿದೆ.