ಮಂಗಳೂರು: ರೇಗೋ ವಿನಿತಾಗೆ 9ನೆ ರ‍್ಯಾಂಕ್
Update: 2017-02-28 23:31 IST
ಮಂಗಳೂರು, ಫೆ.28: ಮಂಗಳೂರು ವಿವಿ ನಡೆಸಿದ ಬಿಎಡ್ ಪರೀಕ್ಷೆಯಲ್ಲಿ ಮಣ್ಣಗುಡ್ಡೆಯ ಪ್ರೇಮಕಾಂತಿ ಕಾಲೇಜಿನ ವಿದ್ಯಾರ್ಥಿನಿ ರೇಗೋ ವಿನಿತಾಗೆ 9ನೆ ರ‍್ಯಾಂಕ್ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಕಾಲೇಜಿನ 92 ವಿದ್ಯಾರ್ಥಿಗಳ ಪೈಕಿ 63 ಮಂದಿ ಉನ್ನತ ಶ್ರೇಣಿ, 25 ಮಂದಿ ಪ್ರಥಮ, 3 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.