×
Ad

ಇಂಡಿಯನ್ ವಾರಿಯರ್ಸ್‌ಗೆ ಎನ್‌ಪಿಎಲ್ ಟ್ರೋಫಿ

Update: 2017-03-01 10:31 IST

ವಿಟ್ಲ, ಮಾ.1: ಪಾಣೆಮಂಗಳೂರು ಸಮೀಪದ ನಂದಾವರ ಕೂಲ್ ಗೈಸ್ ವತಿಯಿಂದ ನಡೆದ 3ನೇ ವರ್ಷದ ನಂದಾವರ ಪ್ರೀಮಿಯರ್ ಲೀಗ್ (ಎನ್‌ಪಿಎಲ್)-2017 ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರ್ ನಂದಾವರ ಮಾಲಕತ್ವದ ಇಂಡಿಯನ್ ವಾರಿಯರ್ಸ್‌ ನಂದಾವರ ತಂಡ ಚಾಂಪಿಯನ್ ಆಗಿ ಮೂಡಿ ಬಂತು. ಇಬ್ರಾಹೀಂ ನಂದಾವರ ಮಾಲಕತ್ವದ ಸುಪರ್ ಚೋಯ್ಸಾ ತಂಡ ರನ್ನರ್ಸ್‌ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ.ಅಮೀರ್ ಅಹ್ಮದ್ ತುಂಬೆ ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಸಜಿಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ, ಸದಸ್ಯರಾದ ಯೂಸುಫ್ ಕರಂದಾಡಿ, ಇದ್ದಿನಬ್ಬ ನಂದಾವರ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಸಂಚಾಲಕ ಎಂ. ಜನಾರ್ದನ ಭಟ್, ಪ್ರಮುಖರಾದ ಕಾಸಿಂ ಶಾಂತಿಅಂಗಡಿ, ನಾಸಿರ್ ನಂದಾವರ, ಸೌದಿ ಅರೇಬಿಯಾ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೂಲ್‌ಗೈಸ್ ಪದಾಧಿಕಾರಿಗಳಾದ ಅನ್ಸಾರ್, ಶಾಫಿ, ಇಸ್ಮಾಯಿಲ್, ವಾರಿಸ್, ಸಾದಿಕ್, ಮನ್ಸೂರು, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ನಂದಾವರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರುಗಳಾದ ಗೋಪಾಲಕೃಷ್ಣ ಹಾಗೂ ಅಬ್ದುಲ್ ಕರೀಂ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News