ಮಂಗಳೂರಿನಲ್ಲಿ ಡೆಕ್ಕನ್ ಏರ್‌ಸ್ಪೋರ್ಟ್ಸ್‌ನಿಂದ ಹಾಟ್ ಏರ್ ಬಲೂನಿಂಗ್!
ಮಂಗಳೂರು, ಮಾ.1: ಡೆಕ್ಕನ್ ಏರ್‌ಸ್ಪೋರ್ಟ್ಸ್ ವತಿಯಿಂದ ದಕ್ಷಿಣ ಭಾರತದ ಮೂರು ರಾಜ್ಯಗಳ ನಾಲ್ಕು ನಗರಗಳಲ್ಲಿ ಹಾಟ್ ಏರ್ ಬಲೂನಿಂಗ್ ಕಾರ್ಯಕ್ರಮದ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಹಾರ್ ಏರ್ ಬಲೂನಿಂಗ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಶೇಕ್ ಅಬ್ದುಲ್ ಮಲಿಕ್, ಮಂಗಳೂರಿನ ನೆಹರೂ ಮೈದಾನದಲ್ಲಿ ಮಾರ್ಚ್ 4ರಂದು ಬೆಳಗ್ಗೆ 7 ಗಂಟೆಗೆ ಹಾಟ್ ಏರ್ ಬಲೂನ್ಸ್, ಗ್ಲೆಡರ್ಸ್, ಸ್ಕೆಡೈವಿಂಗ್, ಡ್ರೋನ್ಸ್ ಮತ್ತು ಪ್ಯಾರ ಮೋಟರಿಂಗ್ ಮೊದಲಾದ ಆಕಾಶಕಾಯ ಸಾಹಸಗಳ ಹಾರಾಟವನ್ನು ಆಯೋಜಿಸಲಾಗಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಪರಿಣಿತರ ತಂಡ ಈ ಸಾಹಸದಲ್ಲಿ ತೊಡಗಿಕೊಳ್ಳಲಿದ್ದು, ಮಂಗಳೂರಿನ ಬಳಿಕ ಕೊಚ್ಚಿನ್‌ನಲ್ಲಿ ಮಾರ್ಚ್ 8ರಂದು, ಕೊಯಮತ್ತೂರಿನಲ್ಲಿ ಮಾ. 10ರಂದು ಮತ್ತು ಬೆಂಗಳೂರಿನಲ್ಲಿ ಮಾ. 12ರಂದು ಈ ಪ್ರಾಯೋಗಿಕ ಆಕಾಶಕಾಯ ಸಾಹಸಗಳ ಹಾರಾಟ ನಡೆಯಲಿದೆ. ಅಕಾರಿಗಳನ್ನು ಈ ಸಾಹಸಗಳ ಮೂಲಕ ಗಮನ ಸೆಳೆದು ಮುಂದೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಈ ಸಾಹಸಗಳನ್ನು ಆರಂಭಿಸಲು ಕ್ರಮ ಕೈಗೊಳಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಸಲಾಂ, ಮುಹಮ್ಮದ್ ನಿಸಾರ್ ಉಪಸ್ಥಿತರಿದ್ದರು.