×
Ad

ರಸ್ತೆಬದಿ ಅನಧಿಕೃತ ಅಂಗಡಿ ತೆರವಿಗೆ ಕ.ಸ್ವಾ.ಕ್ರಾಂತಿ ಸಂಘ ಜಿಲ್ಲಾಧಿಕಾರಿಗೆ ಮನವಿ

Update: 2017-03-01 15:43 IST

ಭಟ್ಕಳ, ಮಾ.1: ನಗರದ ವಿವಿಧೆಡೆ ಸರಕಾರಿ ಸ್ಥಳಗಳಲ್ಲಿ ಅನಧಿಕೃತ ಅಂಗಡಿ ಮತ್ತು ಕಟ್ಟಡಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಉ.ಕ.ಜಿಲ್ಲಾ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ ಹಾಗೂ ಭಟ್ಕಳ ಘಟಕ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿತು.

ಮನವಿಯಲ್ಲಿ ಭಟ್ಕಳ ಪಟ್ಟಣದ ಕೆಲವು ಪ್ರದೇಶದಲ್ಲಿ ಅನಧಿಕೃತವಾಗಿ ಸರಕಾರಿ ಜಾಗದಲ್ಲಿ ಜೋಪಡಿ ಅಂಗಡಿ ಇಟ್ಟು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಕೆಲವು ಕಡೆ ಪುಟ್‌ಪಾತ್ ಮೇಲೆಯೇ ಅಂಗಡಿ ಇಟ್ಟು ವ್ಯವಹಾರ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಭಾರಿ ತೊಂದರೆಯಾಗಿರುವುದರ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗುತ್ತಿದ್ದು, ಅಪಘಾತ ಸಂಖ್ಯೆ ಹೆಚ್ಚಲು ಇದೂ ಒಂದು ಕಾರಣವಾಗಿದೆ. ಈಗಾಗಲೇ ಇದರಿಂದಾಗಿಯೇ ಪಟ್ಟಣದಲ್ಲಿ ಅಪಘಾತದಿಂದ ಸಾವು ನೋವು ಸಂಭವಿಸಿದೆ. ಈ ಹಿಂದೆ ಮನೀಶ್ಮೌದ್ಗೀಲ್ ಜಿಲ್ಲಾಧಿಕಾರಿಯಾಗಿದ್ದ ಸಂದಭದರ್ಲ್ಲಿ ಭಟ್ಕಳದಲ್ಲಿ ಅನಧಿಕೃತವಾಗಿ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಯಾವುದೇ ಮುಲಾಜಿಲ್ಲದೇ ಖುಲ್ಲಾಪಡಿಸಿದ್ದರು. ಇವರು ವರ್ಗಾವಣೆಯಾದ ನಂತರ ಮತ್ತೆ ಸರಕಾರಿ ಜಾಗದಲ್ಲಿ ಅನಧಿಕೃತ ಅಂಗಡಿ ನಿರ್ಮಿಸಲಾಗಿದೆ. ಆದರೆ ಸರಕಾರಿ ಜಾಗದಲ್ಲಿರುವ ಅನಧೀಕೃತ ಅಂಗಡಿಗಳನ್ನು ಖುಲ್ಲಾಪಡಿಸಬೇಕಾದ ತಾಲೂಕಾಢಳಿತ ಹಾಗೂ ಪುರಸಭೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದ. ಕೆಲವು ಕಡೆ ಅನಧಿಕೃತ ಅಂಗಡಿ ಖುಲ್ಲಾ ಪಡಿಸಲು ನ್ಯಾಯಾಲಯದಿಂದ ಆದೇಶವಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಕೆಲವು ಕಡೆ ನ್ಯಾಯಾಲಯದ ಆದೇಶದಂತೆ ಖುಲ್ಲಾಪಡಿಸಿದ್ದರೂ ಮತ್ತೆ ಜೋಪಡಿ ಅಂಗಡಿ ನಿರ್ಮಿಸಲು ಅನುವು ಮಾಡಿಕೊಡಲಾಗಿದೆ. ಈ ಅನಧಿಕೃತ ಅಂಗಡಿಗಳಲ್ಲಿ ಕಾನೂನೂ ಬಾಹಿರ ಚಟುವಟಿಕೆಗಳು ನೆಯುತ್ತಿರುವ ಬಗ್ಗೆ ಕೇಳಿ ಬಂದಿದೆ ಎಂದು ಮನವಿಯಲ್ಲಿ ತಿಳಿಸಿದೆ.

ಈ ಸಂಧರ್ಭದಲ್ಲಿ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಈರಾ ನಾಯ್ಕ, ಜಿಲ್ಲಾ ಪ್ರಧಾನ ಕಾಯದರ್ಶಿ ಕುಮಾರ ನಾಯ್ಕ, ಜಿಲ್ಲಾ ಸಹ ಕಾರ್ಯದರ್ಶಿ ರಾಮಚಂದ್ರ ಗೊಂಡ, ಜಿಲ್ಲಾ ಖಜಾಂಚಿ ವೆಂಕಟೇಶ ನಾಯ್ಕ, ತಾಲೂಕು ಘಟಕದ ಅಧ್ಯಕ್ಷ ಅಶೋಕ ನಾಯ್ಕ, ತಾಲೂಕು ಘಟಕದ ಉಪಾಧ್ಯಕ್ಷ ಕೆ.ಎಮ್.ಶರೀಫ್, ತಾಲೂಕಾ ಪ್ರಧಾನ ಕಾರ್ಯದರ್ಶೀ ಜೀವನ ನಾಯ್ಕ, ತಾಲೂಕು ಸಹ ಕಾರ್ಯದರ್ಶೀ ದೇವೆಂದ್ರ ನಾಯ್ಕ, ಸದಸ್ಯರಾದ ಸುರೇಶ ನಾಯ್ಕ, ಚಂದ್ರು ಕೆ.ನಾಯ್ಕ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News