×
Ad

ಸಜಿಪನಡು: ಮನೆಗೆ ಅಕ್ರಮ‌ ಪ್ರವೇಶಿಸಿ ಜೀವ ಬೆದರಿಕೆ: ಗರ್ಭಿಣಿ ಮಹಿಳೆಯಿಂದ ಠಾಣೆಗೆ ದೂರು

Update: 2017-03-01 19:29 IST

ಬಂಟ್ವಳ, ಮಾ. 1: ಮನೆಯೊಳಗೆ ಅಕ್ರಮ ಪ್ರವೇಶಿಸಿ ಅವ್ಯಾಚ ಶಬ್ದದಿಂದ ಬೈದು, ಹಲ್ಲೆ ನಡೆಸಿದಲ್ಲದೆ ತನ್ನ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಇಬ್ಬರು ವ್ಯಕ್ತಿಗಳ ವಿರುದ್ಧ ಸಜಿಪನಡು ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 

ಸಜೀಪನಡು ನಿವಾಸಿ ಅಬೂಬಕ್ಕರ್ ಮತ್ತು  ಕೋಣಿಮಾರ್ ನಿವಾಸಿ ಅಬ್ದುಲ್ ರಹ್ಮಾ‌ನ್ ಆರೋಪಿಗಳು. ಈ ಇಬ್ಬರ ವಿರುದ್ಧ ಕೋಣಿಮಾರ್ ನಿವಾಸಿ ಕಬೀರ್ ಎಂಬವರ ಪತ್ನಿ ರಹನಾ ಎಂಬವರು ದೂರು ನೀಡಿದ್ದಾರೆ. 

ಫೆ. 28ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆಯೊಳಗ್ಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಆರೋಪಿಗಳು ತನ್ನ ಗಂಡನನ್ನು ವಿಚಾರಿಸಿ ಅವರಿಗೆ ಅವ್ಯಾಚ ಶಬ್ದದಿಂದ ಬೈದಿದಲ್ಲದೆ ಕೊಲೆ ನಡೆಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.  ಈ ಸಂದರ್ಭದಲ್ಲಿ 7 ತಿಂಗಳ ಗರ್ಭಿಣಿಯಾದ ನನ್ನನ್ನು ದೂಡಿ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಮಹಿಳೆ ನನಗೂ ನನ್ನ ಪತಿಗೆ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ. 

ದೂರು ನೀಡಿದ ಮಹಿಳೆ ರಹನಾ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿರುವ  ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News