×
Ad

ಬಂಟಕಲ್ ಕಾಲೇಜಿಗೆ 25 ಇಸ್ರೋ ವಿಜ್ಞಾನಿಗಳ ಭೇಟಿ

Update: 2017-03-01 19:44 IST

ಶಿರ್ವ, ಮಾ.1: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸುಮಾರು 25 ವಿಜ್ಞಾನಿಗಳು ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದರು.

 ಈ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಬಿ.ಎಚ್.ಎಂ.ದ್ವಾರಕೀಶ್ ಮಾತನಾಡಿ, ವೈಜ್ಞಾನಿಕ ಸಂಶೋಧನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆ ಮೂಲಕ ತಮ್ಮ ಕನಸನ್ನು ವಾಸ್ತವಗೊಳಿಸಬೇಕು ಎಂದು ಹೇಳಿದರು.

ಇನ್ನೋರ್ವ ಹಿರಿಯ ವಿಜ್ಞಾನಿ ರಾಮಚಂದ್ರ ಕಳೆದ ನಾಲ್ಕು ದಶಕಗಳಲ್ಲಿ ಇಸ್ರೊದ ಪ್ರಮುಖ ಯೋಜನೆಗಳಾದ ಚಂದ್ರಯಾನ-1 ಮತ್ತು ಮಂಗಳ ಯಾನ-1ರ ಬಗ್ಗೆ ವಿವರಿಸಿದರು. ನಂತರ ಎಲ್ಲಾ ವಿಜ್ಞಾನಿಗಳು ವಿದ್ಯಾರ್ಥಿ ಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಭುವನಮಿತ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News