ಸಾಕ್ಷಿ ಮಹಾರಾಜ್ ಹೇಳಿಕೆಗೆ ಎಸ್ಸೆಸ್ಸೆಫ್ ಖಂಡನೆ
Update: 2017-03-01 20:29 IST
ಕೊಡಗು, ಮಾ.1: ಮುಸ್ಲಿಮರ ಮೃತದೇಹವನ್ನೂ ಸುಡಬೇಕೆಂದು ದೇಶದ ಸಂಸದ ಸಾಕ್ಷಿ ಮಹಾರಾಜ್ ರ ಹೇಳಿಕೆ ಕೊಟ್ಟಿರುವುದನ್ನು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಡಗು ಖಂಡಿಸಿದ್ದಾರೆ.
ಜನಪ್ರತಿನಿಧಿಗಳೆನಿಸಿದವರ ಇಂತಹ ಸಂವಿಧಾನ ವಿರೋಧಿ ಹೇಳಿಕೆಗಳಿಂದ; ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಹುಟ್ಟಿಸುತ್ತದೆ. ಈ ಸಾಕ್ಷಿ ಮಹಾರಾಜ್ ರವರು ಈ ಹಿಂದೆಯೂ ಒಂದೆರಡು ಬಾರಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದರು.
ಇಂತಹ ಅವಿವೇಕಿತನದ ಮಾತುಗಳನ್ನಾಡುವ ಸಂಸದರನ್ನು ಕೇಂದ್ರ ಸರಕಾರವು ಹದ್ದುಬಸ್ತಿನಲ್ಲಿಡಲಿ, ಯೋಧರ ಕುಟುಂಬದ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ಅಂತಹವರ ವಿರುದ್ದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಡಗು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.