×
Ad

ಬೆಳ್ತಂಗಡಿ: ಶಿಶಿಲೇಶ್ವರ ದೇವಸ್ಥಾನದಲ್ಲಿ ಕಳವು

Update: 2017-03-01 20:48 IST

ಬೆಳ್ತಂಗಡಿ, ಮಾ.1: ಇಲ್ಲಿನ ಶಿಶಿಲೇಶ್ವರ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ನಗದು ಮತ್ತಿತರ ವಸ್ತುಗಳನ್ನು ಕದ್ದೊಯ್ದ ಘಟನೆ ಫೆ.28 ರಂದು ತಡರಾತ್ರಿ ವೇಳೆ ನಡೆದಿದೆ. ಬೆಳಗ್ಗೆ ಪೂಜೆಗೆಂದು ಕ್ಷೇತ್ರಕ್ಕೆ ಅರ್ಚಕರು ಆಗಮಿಸುವಾಗಲೇ ಕಳ್ಳತನವಾದ ಬಗ್ಗೆ ತಿಳಿದು ಬಂದಿದೆ.

ದೇವಳದ ವ್ಯವಸ್ಥಾಪನಾ ಸಮಿತಿಯವರು ನೀಡಿದ ದೂರಿನ ಮೇಲೆ ಪೋಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ. ಆರ್. ಖುದ್ದಾಗಿ ಸ್ಥಳಕ್ಕಾಗಮಿಸಿದ್ದು ಇವರ ನಿರ್ದೇಶನದಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ ಕದ್ರಿ , ಧರ್ಮಸ್ಥಳ ಉಪನಿರೀಕ್ಷಕ ಮಾಧವ ಕೂಡ್ಲು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ರಾತ್ರಿ ವೇಳೆ ದೇವಳದ ಸಮೀಪ ಬಂದಿರುವ ಕಳ್ಳರು ದೇವಳದ ಸಮೀಪ ದ ಕೊಠಡಿಯಲ್ಲಿ ಇಡಲಾಗಿದ್ದ ಕಬ್ಬಿಣದ ಏಣಿಯನ್ನು ದೇವಳದ ಪಾರ್ಶ್ವದ ಮಾಡಿಗೆ ಒರಗಿಸಿ ಇಟ್ಟು ದೇವಳದ ಮಾಡಿಗೆ ಹತ್ತಿ ಒಳಗೆ ಇಳಿದಿದ್ದಾರೆ.

ಗರ್ಭಗುಡಿಯ ಎದುರಿನಲ್ಲಿದ್ದ ಮತ್ತು ಎಡಬಲಗಳಲ್ಲಿದ್ದ ದುರ್ಗೆ ಮತ್ತು ಗಣಪತಿ ದೇವರ ಕಾಣಿಕೆ ಡಬ್ಬಿಗಳನ್ನು ಒಡೆದು ಅದರಲ್ಲಿದ್ದ ನಗದನ್ನು ದೋಚಿದ್ದಾರೆ. ದೇವಳಕ್ಕೆ ಹಾಕಲಾಗಿದ್ದ ಸಿಸಿ ಕ್ಯಾಮೆರಾ ದ ಮೋನಿಟರ್ ನ್ನು ಕದ್ದೊಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News