×
Ad

​ಸಾಕ್ಷಿ ಮಹಾರಾಜ್ ಹೇಳಿಕೆಗೆ ಮಂಚ್ ಖಂಡನೆ

Update: 2017-03-01 20:56 IST

ಮಂಗಳೂರು, ಮಾ.1: ಸ್ಮಶಾನಗಳಿಗೆ ಸ್ಥಳವಿಲ್ಲದ ಕಾರಣ ಮುಸ್ಲಿಮರ ಹೆಣಗಳನ್ನು ಸುಡಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನೀಡಿದ ಹೇಳಿಕೆಯನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.

 ಮುಸ್ಲಿಮರನ್ನು ಅವರದ್ದೇ ಧರ್ಮಕ್ಕೆ ಸೇರಿದ ಧಪನಭೂಮಿಯಲ್ಲಿ ದಫನ ಮಾಡುತ್ತಾರೆಯೇ ಹೊರತು ಅನ್ಯ ಧರ್ಮೀಯರ ದಫನಭೂಮಿಗಳಲ್ಲಿ ಅಲ್ಲ. ಆಡಳಿತರೂಢ ರಾಷ್ಟ್ರೀಯ ಪಕ್ಷವೊಂದರ ಸಂಸದರೊಬ್ಬರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಪದೇ ಪದೇ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡುವುದು ಮತ್ತು ಅದರ ಬಗ್ಗೆ ಪ್ರಧಾನಮಂತ್ರಿಯವರು ವೌನ ವಹಿಸಿರುವುದು ವಿಷಾದನೀಯ ಎಂದು ಸಂಘದ ಪರವಾಗಿ ಅಲಿ ಹಸನ್, ವಸಂತ ಟೈಲರ್, ರೋಶನ್ ಪತ್ರಾವೊ, ಮುಹಮ್ಮದ್ ಸಾಲಿ, ಮೋಹನ್ ಎಂ., ಗೋಲ್ಡ್‌ವಿನ್ ಡಿಸೋಜಾ ಮತ್ತಿತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News