×
Ad

ಕಾರ್ಗಿಲ್ ಹುತಾತ್ಮನ ಪುತ್ರಿಯನ್ನು ಬೆಂಬಲಿಸಿದ ವಿದ್ಯಾ ಬಾಲನ್ ಹೇಳಿದ್ದೇನು ?

Update: 2017-03-01 20:58 IST

ಮುಂಬೈ, ಮಾ.1: ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರ ಪ್ರಕರಣದಲ್ಲಿ ತಾನು ಹೆಚ್ಚಿನದೇನನ್ನೂ ಹೇಳಲು ಬಯಸುವುದಿಲ್ಲ. ಆದರೆ ಇನ್ನೊಬ್ಬರ ಅಭಿವ್ಯಕ್ತಿ ಸ್ವಾತಂತ್ರವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹಿಂದಿ ಸಿನೆಮಾ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ. 

ಒಬ್ಬ ಏನನ್ನೋ ಹೇಳುತ್ತಾನೆ. ಇನ್ನೊಬ್ಬಳು ಅದಕ್ಕೆ ಪ್ರತ್ರಿಕ್ರಿಯೆ ನೀಡುತ್ತಾಳೆ. ಎಲ್ಲರೂ ಅವರವರ ಮಟ್ಟಿಗೆ ಸರಿಯಾದ್ದನ್ನೇ ಹೇಳಿರುತ್ತಾರೆ. ಎಲ್ಲರಿಗೂ ತಮಗನಿಸಿದ್ದನ್ನು ವ್ಯಕ್ತಪಡಿಸುವ ಸ್ವಾತಂತ್ರವಿದೆ. ಇದೇ ಅಭಿವ್ಯಕ್ತಿ ಸ್ವಾತಂತ್ರ . ಇದನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಹಿಂಸೆ ನಡೆಯಬಾರದು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಸಮರ್ಥಿಸಲಾಗದು ಎಂದವರು ಹೇಳಿದರು.

ಸಂಜಯ್ ಚೋಪ್ರಾ ಮತ್ತು ನಮಿತಾ ರಾಯ್ ಘೋಷ್ ಅವರ ‘ದಿ ರಾಂಗ್ ಟರ್ನ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರ ನಿರ್ಮಾಪಕ ಟಿಗ್‌ಮಾಂಷು ಧುಲಿಯಾ ಮಾತನಾಡಿ, ಒಂದು ಸಣ್ಣ ಗುಡ್ಡವನ್ನು ಪರ್ವತ ಮಾಡಿರುವುದು ವಿಷಾದನೀಯ ಎಂದರು. ಅವಳೋರ್ವ ಅಮಾಯಕ ಹುಡುಗಿ. ಆಕೆ ಏನೋ ಹೇಳಿದಳು ಮತ್ತು ಗಣ್ಯ ವ್ಯಕ್ತಿಗಳೂ ಸೇರಿದಂತೆ ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದರು. ದೇಶದ ಅಧಿಕ ಸಂಖ್ಯೆಯ ಜನರು ಈ ರೀತಿ ಯೋಚಿಸುತ್ತಾರೆ ಎಂದರೆ, ದೇಶ ಮುಂದುವರಿಯುತ್ತಿರುವ ರೀತಿ ಸರಿಯಿಲ್ಲ ಎಂಬುದು ನನ್ನ ಅನಿಸಿಕೆ ಎಂದವರು ಹೇಳಿದರು.

 
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News