ಮಿತ್ತಬೈಲು: ರಸ್ತೆ ಕಾಮಗಾರಿ, ನೀರು ಸರಬರಾಜು ವ್ಯವಸ್ಥೆಗೆ ಗುದ್ದಲಿ ಪೂಜೆ
Update: 2017-03-01 21:03 IST
ಮೂಡುಬಿದಿರೆ, ಮಾ.1: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಬೈಲು 1ನೇ ವಾರ್ಡ್‌ಗೆ 25 ಲಕ್ಷ ಅನುದಾನದಲ್ಲಿ ಓವರ್‌ಹೆಡ್‌ಟ್ಯಾಂಕ್ ಹಾಗೂ ನೀರು ಸರಬರಾಜು ಪೈಪ್‌ಲೈನ್ ವ್ಯವಸ್ಥೆ ಹಾಗೂ ಮಿತ್ತಬೈಲು ಬಂಕಿಮಜಲು ಕೊರಗರ ಕಾಲನಿಯ ರಸ್ತೆಗೆ 45 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಅಳವಡಿಕೆಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಗೆ ಪಂಚಾಯಿತಿ ಸದಸ್ಯೆ ವೀಣಾ ನಾಯ್ಕೆ, ನಿವೃತ್ತ ಶಿಕ್ಷಕರಾದ ಅಂಡ್ರೊ ಡಿಸೋಜ, ಅಂಡ್ರೊ ಸೆರಾವೊ, ಟಿ.ಎನ್ ಕೆಂಬಾರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಾಸುದೇವ ನಾಯಕ್, ಪೌಲ್ ಡಿಸೋಜ, ಗುತ್ತಿಗೆದಾರ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.