ಮಣಿಪಾಲ: ಪ್ರತ್ಯೇಕ ಪ್ರಕರಣ, ಇಬ್ಬರ ಆತ್ಮಹತ್ಯೆ
Update: 2017-03-01 21:29 IST
ಮಣಿಪಾಲ, ಮಾ.1: ವೈಯಕ್ತಿಕ ಕಾರಣದಿಂದ ಮನನೊಂದ ಪರ್ಕಳದ ಅಶೋಕ್ ನಾಯಕ್(40) ಎಂಬವರು ಫೆ.28ರಂದು ಸಂಜೆ ವೇಳೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ:
ಫೆ.22ರಂದು ರಾತ್ರಿ ವೇಳೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪೆರ್ಡೂರು ಹತ್ರಬೈಲು ಹೆರ್ಡೆ ನಿವಾಸಿ ಮಣಿಕಂಠ(22) ಎಂಬ ವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.28ರಂದು ಸಂಜೆ 4:30ರ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.