×
Ad

ಕ್ರೀಡೆಯಿಂದದೈಹಿಕ ಹಾಗೂ ಮಾನಸಿಕ ಸಧೃಢತೆ ಸಾಧ್ಯ: ನಾಗರಾಜ ನಾಯಕ

Update: 2017-03-01 21:35 IST

ಕುಮಟಾ, ಮಾ.1: ತಾಲೂಕಿನ ವನ್ನಳ್ಳಿ ಗ್ರಾಮದಲ್ಲಿ ನವಚೇತನ ಗೆಳೆಯರ ಬಳಗ ಇವರ ಆಶ್ರಯದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.

  ಈ ಸಂದರ್ಭದಲ್ಲಿ ಬಹುಮಾನ ವಿತರಕರಾದ ನಾಗರಾಜ ನಾಯಕ ಮಾತನಾಡಿ ಇಲ್ಲಿ, ಕ್ರೀಡೆ ನಡೆಸುತ್ತಿರುವ ಅಂಕಣವನ್ನು ಕ್ರೀಡಾಯೋಗ್ಯವನ್ನಾಗಿ ಮಾಡಿದ ಕಾರ್ಯ, ಸಂಘಟಕರ ಸಂಘಟನಾ ಚಾತುರ್ಯಗಳನ್ನು ಮನಸಾರೆ ಹೊಗಳುತ್ತಾ ಮುಂದೆಯು ಸಹ ನಿಮ್ಮೊಂದಿಗೆ ಇರುತ್ತೇನೆಂದು ಹೇಳುತ್ತಾ ಕ್ರೀಡೆಯು ಮಾನವನಿಗೆ ದೈಹಿಕ, ಮಾನಸಿಕವಾಗಿ ಸದೃಢನನ್ನಾಗಿ ಮಾಡುತ್ತದೆ. ಯುವಕರು ಹೆಚ್ಚು-ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಂಡು ಜಿಲ್ಲೆಗೆ ಹೆಸರು ತರುವಂತಾಗಲಿ ಇಂದಿನ ಯುವಕರೇ ಮುಂದಿನ ದೇಶಕಟ್ಟುವ ಯೋಧರು ಎನ್ನುತ್ತಾ ಇದರೊಂದಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಸೇರುವಂತಾಗಬೇಕು ಎಂದು ಹೇಳಿದರು.

 ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಹಿಂದೆಯು ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು. ಮುಂದೆಯೂ ಸಹ ನಾವೆಲ್ಲ ನಿಮ್ಮೊಂದಿಗಿರುತ್ತೇವೆ. ಇದೇ ರೀತಿಯ ಕ್ರೀಡೆಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

ವೇದಿಕೆಯಲ್ಲಿ ಪ್ರದೀಪ ನಾಯಕ, ಮನೀಷ ನಾಯಕ, ಮಹೇಶ ನಾಯ್ಕ, ಅರುಣ ಎಚ್. ನಾಯ್ಕ, ಮಂಜುನಾಥ ಎಚ್. ನಾಯ್ಕ, ರಮೇಶ ಕೆ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News