ಮ್ಯಾನ್ಮಾರ್-ಚೀನಾ ಗಡಿಯಲ್ಲಿ ಘರ್ಷಣೆ: 160 ಸಾವು
Update: 2017-03-01 21:38 IST
ನೇಪಿಡಾವ್ (ಮ್ಯಾನ್ಮಾರ್), ಮಾ. 1: ಮ್ಯಾನ್ಮಾರ್‌ನ ಶಾನ್ ರಾಜ್ಯದಲ್ಲಿ ಸೇನೆ ಮತ್ತು ಶಸ್ತ್ರಸಜ್ಜಿತ ಜನಾಂಗೀಯ ಗುಂಪುಗಳ ನಡುವೆ ನಡೆದ ಘರ್ಷಣೆಗಳಲ್ಲಿ ಮೂರು ತಿಂಗಳಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೀನಾ ಗಡಿ ಸಮೀಪ ನವೆಂಬರ್‌ನಲ್ಲಿ ಘರ್ಷಣೆ ಆರಂಭಗೊಂಡ ಬಳಿಕ 20,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.
ಉತ್ತರದ ರಾಜ್ಯ ಶಾನ್ ಮತ್ತು ನೆರೆಯ ರಾಜ್ಯ ಕಚಿನ್‌ಗಳಲ್ಲಿ ಉದ್ವಿಗ್ನತೆ ನೆಲೆಸಿದೆ.
‘ನಾರ್ದರ್ನ್ ಅಲಯನ್ಸ್’ ಎಂಬ ಹೆಸರಿನಲ್ಲಿ ಒಂದಾಗಿರುವ ಹಲವಾರು ಸಶಸ್ತ್ರ ಗುಂಪುಗಳು ಶಾನ್‌ನ ಉತ್ತರ ಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಿದವು ಎನ್ನಲಾಗಿದೆ. ಅದನ್ನು ಸೇನೆಯು ಭಾರೀ ಫಿರಂಗಿ ಮತ್ತು ವಾಯು ದಾಳಿಗಳ ಮೂಲಕ ಎದುರಿಸಿತು.
ಈ ಭಾಗದಲ್ಲಿ 2011ರಿಂದ 1 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.