ಪುತ್ತೂರು: ಸ್ವಾಭಿಮಾನಿ ವೇದಿಕೆಯಿಂದ ಶಾಸಕಿ ಶಕುಂತಳಾ ಶೆಟ್ಟಿ 70ನೆ ಹುಟ್ಟುಹಬ್ಬ ಆಚರಣೆ
ಪುತ್ತೂರು, ಮಾ.1: ಶಾಸಕಿ ಶಕುಂತಳಾ ಶೆಟ್ಟಿ ಅವರ 70ನೇ ಹುಟ್ಟು ಹಬ್ಬವನ್ನು ಪುತ್ತೂರಿನ ಸ್ವಾಭಿಮಾನಿ ವೇದಿಕೆಯ ವತಿಯಿಂದ ಬುಧವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಇದರ ಶ್ರೀ ಏಕಗಮಾನ್ಯನಂದ ಸ್ವಾಮೀಜಿ, ಶಾಸಕಿ ಶಕುಂತಳಾ ಶೆಟ್ಟಿ, ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಅಧ್ಯಕ್ಷೆ ಗಂಗಾರತ್ನ ವಿ ರೈ, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಸ್ವಾಭಿಮಾನಿ ವೇದಿಕೆಯ ಕೆ.ಜಿ. ಭಟ್, ಮನಮೋಹನ್ ರೈ, ಶಾರದಾ ಕೇಶವ, ಸರಸ್ವತಿ ಭಟ್, ಜನಾರ್ಧನ ಪೆರಾಜೆ, ತುಳಸಿ ಮಂಜುನಾಥ ಕೆಮ್ಮಾಯಿ, ಶಶಿಕಲಾ, ತಹಸೀಲ್ದಾರ್ ಅನಂತಶಂಕರ್, ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ವಿಠಲ ಶೆಟ್ಟಿ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ, ಸುನೀಲ್ ಬೋರ್ಕರ್, ಶ್ರೀಕೃಷ್ಣ ಉಪಾಧ್ಯಾಯ, ಸಿಡಿಪಿಒ ಶಾಂತಿ ಹೆಗಡೆ ಮತ್ತಿತತರು ಉಪಸ್ಥಿತರಿದ್ದರು.
ಸುಭಾಷ್ ರೈ ಬೆಳ್ಳಿಪ್ಪಾಡಿ ಸ್ವಾಗತಿಸಿದರು. ಬಾಲಕೃಷ್ಣ ಬೋರ್ಕರ್ ವಂದಿಸಿದರು.