×
Ad

ಸಿರಿಯದ ಅಸಾದ್ ರಕ್ಷಣೆಗಾಗಿ ರಶ್ಯದ 7ನೆ ವೀಟೊ

Update: 2017-03-01 21:41 IST

ನ್ಯೂಯಾರ್ಕ್, ಮಾ. 1: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರತಿಕೂಲ ನಿರ್ಣಯದಿಂದ ಸಿರಿಯ ಅಧ್ಯಕ್ಷ ಬಶರ್ ಅಸಾದಿಯನ್ನು ರಕ್ಷಿಸಲು ರಶ್ಯ ಮಂಗಳವಾರ ತನ್ನ ಏಳನೆ ವೀಟೊ ಚಲಾಯಿಸಿದೆ.

ಆರು ವರ್ಷಗಳ ಸಿರಿಯ ಸಂಘರ್ಷದ ವೇಳೆ ಅಲ್ಲಿನ ಆಡಳಿತವು ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಆ ದೇಶದ ವಿರುದ್ಧ ದಿಗ್ಬಂಧನಗಳನ್ನು ವಿಧಿಸುವ ಪಾಶ್ಚಾತ್ಯ ದೇಶಗಳ ನಿರ್ಣಯಕ್ಕೆ ರಶ್ಯ ತಡೆ ಹಾಕಿದೆ.ಈ ವಿಷಯದಲ್ಲಿ ರಶ್ಯವನ್ನು ಬೆಂಬಲಿಸಿದ ಚೀನಾ, ಸಿರಿಯಕ್ಕೆ ಸಂಬಂಧಿಸಿ ತನ್ನ ಆರನೆ ವೀಟೊವನ್ನು ಚಲಾಯಿಸಿತು.

ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಗಳು ಸಿದ್ಧಪಡಿಸಿರುವ ನಿರ್ಣಯದ ಮೇಲಿನ ಮತದಾನವು, ಜಿನೇವದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಶಾಂತಿ ಮಾತುಕತೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ರಶ್ಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News